ಶೋಷಿತರ ಬದಲಿಗೆ ಉಳ್ಳವರ ಅಭಿವೃದ್ದಿಯಾಗುತ್ತಿದೆ : ಹೆಚ್‍. ವಿಶ್ವನಾಥ್

Prasthutha|

ಹುಣಸೂರು: ಶೋಷಿತರ ಕುರಿತು ಚರ್ಚಿಸಬೇಕಾದ ಸದನದಲ್ಲಿ ಹಿಜಾಬ್, ಹಲಾಲ್ ಕಟ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ. ಹೆಚ್‍. ವಿಶ್ವನಾಥ್ ಹೇಳಿದ್ದಾರೆ.

- Advertisement -

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬಾಬು ಜಗಜೀವನರಾಂ 115 ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಅಭಿವೃದ್ದಿಗಾಗಿ ಸಿದ್ದರಾಮಯ್ಯ 28 .5 ಸಾವಿರ ಕೋಟಿ ನೀಡಿದ್ದರು. ಜೊತೆಗೆ ಆ ವರ್ಗದ ಜನರೇ ಗುತ್ತಿಗೆ ನಿರ್ವಹಿಸಲು ಅವಕಾಶವನ್ನೂ ಕಲ್ಪಿಸಿದ್ದರು. ಬೊಮ್ಮಾಯಿಯವರು 28 ಸಾವಿರ ಕೋಟಿ ಘೋಷಿಸಿದ್ದಾರೆ. ಆದರೆ ಯಾರ ಉದ್ದಾರವಾಗಿದೆ. ಶೋಷಿತರ ಬದಲಿಗೆ ಉಳ್ಳವರ ಅಭಿವೃದ್ದಿಯಾಗುತ್ತಿದೆ ಎಂದು ಹೇಳಿದರು.

ಈ ಬಗ್ಗೆ ಚರ್ಚೆಯಾಗಬೇಕಾದ ಸದನದಲ್ಲಿ ಹಲಾಲ್ ಕಟ್, ಮೈಕ್ ಸೆಟ್ ,ಹಿಜಾಬ್  ಕುರಿತು ಚರ್ಚೆ ಮಾಡುತ್ತಿದ್ದಾರೆ. ಶೋಷಿತ ಸಮುದಾಯದ ಶಾಸಕರು ಸಹ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.



Join Whatsapp