ಹಾಸನ । ಅಝಾನ್’ಗೆ ವಿರುದ್ಧವಾಗಿ ಹನುಮಾನ್ ಚಾಲಿಸ ಪಠಿಸಿದ ಕಾಳಿಸ್ವಾಮಿ

Prasthutha|

ಹಾಸನ: ಹಲಾಲ್ – ಜಟ್ಕಾ ಕಟ್ ವಿವಾದದ ಬೆನ್ನಲ್ಲೇ ಸಂಘಪರಿವಾರದ ಪರ ಕಾಳಿಸ್ವಾಮಿ ಅಝಾನ್’ಗೆ ವಿರುದ್ಧವಾಗಿ ಬೆಳಗ್ಗಿನ ಜಾವ ಧ್ವನಿವರ್ಧಕದ ಮೂಲಕ ಹನುಮಾನ್ ಚಾಲಿಸ ಪಠಿಸಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

- Advertisement -

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಂಘಪರಿವಾರ ಸಾಲುಸಾಲಾಗಿ ವಿವಾದವನ್ನು ಸೃಷ್ಟಿಸುತ್ತಿದ್ದು, ಹಲಾಲ್ – ಜಟ್ಕಾ ವಿವಾದದ ಬಳಿಕ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ಅಝಾನ್ ಕೊಡುವುದನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದವು.

ಇದರ ಮುಂದುವರಿದ ಭಾಗವಾಗಿ ಸದಾ ವಿವಾದದ ಕೇಂದ್ರ ಬಿಂದುವಾಗಿರುವ ಹಾಸನದ ಕಾಳಿಕಾ ಮಠದ ಋಷಿಕುಮಾರ ಸ್ವಾಮಿ, ಮುಂಜಾನೆ 5.30 ಕ್ಕೆ ಸರಿಯಾಗಿ 4 ನಿಮಿಷ ಕಾಲ ರಾಮನನ್ನು ಸ್ತುತಿಸಿ, ಹನುಮಾನ್ ಚಾಲಿಸ ಪಠಿಸಿ ವಿವಾದವನ್ನು ಸೃಷ್ಟಿಸಿದ್ದಾರೆ.

- Advertisement -

ಇದರ ಬಳಿಕ ಪ್ರತಿಕ್ರಿಯಿಸಿದ ಕಾಳಿಸ್ವಾಮಿ, ಮಸೀದಿ ಮತ್ತು ಮದ್ರಾಸದಲ್ಲಿರುವ ಮೈಕ್ ಅನ್ನು ತೆಗೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದು ಮುಂದುವರಿದರೆ ಅಝಾನ್ ಸಮಯದಲ್ಲಿ ಮಠದಲ್ಲಿ ನಿರಂತರವಾಗಿ ಹನುಮಾನ್ ಚಾಲಿಸ ಪಠಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.



Join Whatsapp