ವೇತನ ಕಡಿತ ವಿರೋಧಿಸಿ ಮುಷ್ಕರ ಯೋಜಿಸಿದ್ದಕ್ಕಾಗಿ ಪೈಲಟ್ ಗಳನ್ನು ಅಮಾನತುಗೊಳಿಸಿದ ಇಂಡಿಗೋ

Prasthutha|

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ತಂದ ವೇತನ ಕಡಿತವನ್ನು ವಿರೋಧಿಸಿ ಮಂಗಳವಾರ ಮುಷ್ಕರವನ್ನು ಆಯೋಜಿಸಲು ಯೋಜಿಸುತ್ತಿದ್ದ ಕೆಲವು ಪೈಲಟ್‌ ಗಳನ್ನು ಇಂಡಿಗೋ ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಸಾಂಕ್ರಾಮಿಕ ರೋಗದ ಸಮಯದಲ್ಲಿ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯು ತನ್ನ ಪೈಲಟ್‌ ಗಳ ಸಂಬಳವನ್ನು ಶೇಕಡಾ 30 ರಷ್ಟು ಕಡಿತಗೊಳಿಸಿತ್ತು.

ಏಪ್ರಿಲ್ 1 ರಂದು, ವಿಮಾನಯಾನ ಸಂಸ್ಥೆಯು ಪೈಲಟ್‌ ಗಳ ಸಂಬಳವನ್ನು ಶೇಕಡಾ 8 ರಷ್ಟು ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿದ್ದು. ಯಾವುದೇ ಅಡೆತಡೆಗಳಿಲ್ಲದಿದ್ದಲ್ಲಿ ನವೆಂಬರ್‌ ನಿಂದ ಮತ್ತೊಂದು ಶೇಕಡಾ 6.5 ರಷ್ಟು ಹೆಚ್ಚಳವನ್ನು ಜಾರಿಗೊಳಿಸಲಾಗುವುದು ಎಂದು ಅದು ಹೇಳಿದೆ.

- Advertisement -

ಆದಾಗ್ಯೂ, ಪೈಲಟ್‌ ಗಳ ಒಂದು ವಿಭಾಗವು ಅತೃಪ್ತರಾಗಿ ಮುಷ್ಕರವನ್ನು ಆಯೋಜಿಸಲು ನಿರ್ಧರಿಸಿದ್ದರಿಂದ ಅವರಲ್ಲಿ ಕೆಲವರನ್ನು ವಿಮಾನಯಾನ ಸಂಸ್ಥೆ ಅಮಾನತುಗೊಳಿಸಿದೆ  ಎಂದು ಮೂಲಗಳು ತಿಳಿಸಿವೆ.



Join Whatsapp