ಕೆಸಿಸಿ ಟ್ರಸ್ಟ್ ನ ಮಾಸಿಕ 1000 ರೂ. ಉಮ್ರಾ ಯೋಜನೆ: ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ ಪ್ರಕಟಿಸಿ ಪೋಸ್ಟರ್ ಬಿಡುಗಡೆ

Prasthutha|

ಮಂಗಳೂರು: ಕೆಸಿಸಿ ಟ್ರಸ್ಟ್‌ನ ಮಹತ್ವಾಕಾಂಕ್ಷೆಯ ಯೋಜನೆಯಾದ ಮಾಸಿಕ‌1,000 ರೂ. ಪಾವತಿಸಿ ಪವಿತ್ರ ಉಮ್ರಾ ಯಾತ್ರೆಯ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವನ್ನು ಘೋಷಿಸಿದೆ. ರಂಝಾನ್ 30ರಂದು ದ.ಕ.ಜಿಲ್ಲೆಯಲ್ಲಿ ಈ ಯೋಜನೆ ಕೊನೆಗೊಳ್ಳಲಿದ್ದು, ಇದರ ಪೋಸ್ಟರ್ ಬಿಡುಗಡೆ ಸಮಾರಂಭ ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ನಡೆಯಿತು.

- Advertisement -

ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಮೂಸಬ್ಬ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭ ಟ್ರಸ್ಟ್‌ನ ಸಿಇಒ ರಹ್ಮಾನ್, ಯೆನೆಪೊಯ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಅನ್ವರ್, ನಿದೇರ್ಶಕರಾದ  ವಾಸಿಂ ಅಕ್ರಂ ಪುತ್ತೂರು, ಫಾರೂಕ್ ಉಳ್ಳಾಲ, ಹೈದರ್ ಉಪಸ್ಥಿತರಿದ್ದರು.

- Advertisement -

ಕಳೆದ ಮೂರು- ನಾಲ್ಕು ವರ್ಷಗಳಿಂದ ಮಾಸಿಕ 1000 ರೂ. ಪಾವತಿಸಿ ಉಮ್ರಾ ಯಾತ್ರೆ ಕೈಗೊಳ್ಳುವ ಯೋಜನೆ ಚಾಲ್ತಿಯಲ್ಲಿದೆ. ಅಲ್ಲದೆ ಹಲವರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಕೇವಲ ಶ್ರೀಮಂತರು ಮಾತ್ರ ಕೈಗೊಳ್ಳುತ್ತಿದ್ದ ಉಮ್ರಾ ಯಾತ್ರೆಯನ್ನು ಸಮಾಜದ ತಲಮಟ್ಟದ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಟ್ರಸ್ಟ್ ಕಾರ್ಯರೂಪಕ್ಕೆ ತಂದಿದೆ.  ದ.ಕ. ಜಿಲ್ಲೆಯಲ್ಲಿ ಇದೇ ರಂಝಾನ್ 30 ರೊಳಗೆ ಅರ್ಜಿ ಹಾಕಲು ಅವಕಾಶವಿದ್ದು, ಮಾಸಿಕ 1000 ರೂ. ಪಾವತಿಸಲು ಅನುಕೂಲವಿದ್ದವರು ಇದರ ಉಪಯೋಗ ಪಡೆಯಬಹುದು. ಮತ್ತೆ  ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಉಮ್ರಾ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp