ಹಲಾಲ್ ಜಟ್ಕಾ ಸಂಘರ್ಷ: ಬಿಜೆಪಿ ಪ್ರೇರಿತ ಸಂಘಟನೆ ಬಹಿಷ್ಕಾರ ಕರೆ ಕಡೆಗಣಿಸಿ ಹಲಾಲ್ ಮಾಂಸ ಖರೀದಿಸಿದ ದೇವನೂರು ಮಹಾದೇವ

Prasthutha|

ಮೈಸೂರು: ಹಲಾಲ್ – ಜಟ್ಕಾ ಸಂಘರ್ಷ ತಾರಕಕ್ಕೇರಿರುವ ಮಧ್ಯೆ ಯುಗಾದಿ ಆಚರಣೆಯ ಪ್ರಯುಕ್ತ ಮುಸ್ಲಿಮರ ಅಂಗಡಿಗಳಿಂದ ಹಲಾಲ್ ಮಾಂಸ ಖರೀದಿಸದಂತೆ ಬಿಜೆಪಿ ಪ್ರೇರಿತ ಸಂಘಟನೆಗಳು ಕರೆ ನೀಡಿದ್ದ ಬಹಿಷ್ಕಾರವನ್ನು ಕಡೆಗಣಿಸಿ ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಮೈಸೂರಿನ ಮುಸ್ಲಿಮರ ಮಳಿಗೆಗಳಿಂದ ಹಲಾಲ್ ಮಾಂಸವನ್ನು ಖರೀದಿಸುವ ಮೂಲಕ ಸಂಘಪರಿವಾರಕ್ಕೆ ಸಡ್ಡು ಹೊಡೆದಿದ್ದಾರೆ.

- Advertisement -

ಈ ಸಂಬಂಧ ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ವತಿಯಿಂದ, ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿರುವ ಸಂಘಪರಿವಾರದ ನಡೆಯನ್ನು ವಿರೋಧಿಸಿ ಸಹಬಾಳ್ವೆಯನ್ನು ಸಂದೇಶ ಹರಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.

ಈ ಕಾರ್ಯಕ್ರಮದ ಪ್ರಯುಕ್ತ ದೇವನೂರು ಮಹಾದೇವ ಅವರು ಪತ್ನಿ ಸಮೇತರಾಗಿ ಮುಸ್ಲಿಮರ ಮಳಿಗೆಗೆ ತೆರಳಿ ಅಝೀಝ್ ಸೇಠ್ ಮುಖ್ಯ ರಸ್ತೆಯಲ್ಲಿನ ಸೈಯ್ಯದ್ ರಿಝ್ವಾನ್ ನೇತೃತ್ವದ ಮಟನ್ ಆ್ಯಂಡ್ ಚಿಕನ್ ಸ್ಟಾಲ್ ನಿಂದ ಮಾಂಸವನ್ನು ಖರೀದಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

- Advertisement -

ಸಾಹಿತಿ ದೇವನೂರು ಮಹಾದೇವ ಅವರ ಪತ್ನಿ ಕೆ. ಸುಮಿತ್ರಾ ಬಾಯಿ, ಹೋರಾಟಗಾರರಾದ ಪ.ಮಲ್ಲೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಹಕ್ಕುಗಳ ಹೋರಾಟಗಾರ ಗುರುಪ್ರಸಾದ್ ಕೆರಗೋಡು, ದಲಿತ ಹೋರಾಟಗಾರ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಿ. ಮರಂಕಯ್ಯ, ಬಸವರಾಜು, ಕಲ್ಲಹಳ್ಳಿ ಕುಮಾರ್ ಅವರನ್ನೊಳಗೊಂಡಂತೆ ಹಲವಾರು ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




Join Whatsapp