ಬೆಂಗಳೂರು: ಬೇಡ ಸಂಗಮ ಎಂಬ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ವ್ಯವಸ್ಥೆಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ರೇಣುಕಾಚಾರ್ಯರ ಸಹೋದರ ದ್ವಾರಕೇಶ್ವರಯ್ಯ ಅವರನ್ನೊಳಗೊಂಡಂತೆ 11 ಮಂದಿಯ ವಿರುದ್ಧ ದಾವಣಗೆರೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಮಗಳು ಎಂ.ಆರ್. ಚೇತನ ಎಂಬಾಕೆಗೆ ಬೇಡ ಜಂಗಮ ಎಂಬ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿದ್ದು, ಈ ಕುರಿತ ದಾಖಲೆಗಳು ಸಮೂಹ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಲಿಂಗಾಯುತರಾಗಿರುವ ಶಾಸಕ ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಕುಂದೂರು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪಡೆದ ಶಾಲಾ ದಾಖಲಾಯಿಯಲ್ಲೂ ಲಿಂಗಾಯುತ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಈ ಮಧ್ಯೆ ಅವರ ಮಗಳು ಚೇತನ ಎಂಬಾಕೆಗೆ ಜಂಗಮ ಜಾತಿ ಎಂಬ ಪ್ರಮಾಣಪತ್ರವನ್ನು 2012 ರ ನ.17 ರಂದು ಬೆಂಗಳೂರಿನ ಉತ್ತರ ತಾಲೂಕು ತಹಸೀಲ್ದಾರ ಅವರಿಂದ ಪಡೆದಿದ್ದಾರೆ. ಅದನ್ನು ಅಲ್ಲಿನ ಜಿಲ್ಲಾಧಿಕಾರಿ ಪರಿಶೀಲನೆ ನಡೆಸದಿರುವ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ಮಗಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದು ಸತ್ಯ. ಆದರೆ ಆಕೆ ಸರ್ಕಾರದ ಯಾವುದೇ ಸವಲತ್ತನ್ನು ಪಡೆದಿಲ್ಲ ಎಂದು ವಾದಿಸಿದ್ದಾರೆ.
ಮಾತ್ರವಲ್ಲ ಈ ಜಾತಿ ಪ್ರಮಾಣಪತ್ರವನ್ನು ತನ್ನ ಸಹೋದರ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಯ ಮುಖಂಡರಾದ ಹೆಗ್ಗೆರೆ ರಂಗಪ್ಪ ನೀಡಿದ್ದ ದೂರಿನ ಆಧಾರದಲ್ಲಿ ದ್ವಾರಕೇಶ್ವರಯ್ಯ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.