ಹಲಾಲ್ ಜಟ್ಕಾ ಕಟ್ ವಿವಾದ | ರಾಜ್ಯದಲ್ಲಿ ಸ್ಟನ್ನಿಂಗ್ ಕಡ್ಡಾಯ ಆದೇಶ ಸುಳ್ಳು: ಸಚಿವ ಪ್ರಭು ಚವಾಣ್

Prasthutha|

ಬೆಂಗಳೂರು: ರಾಜ್ಯದಲ್ಲಿ ಹಲಾಲ್ – ಜಟ್ಕಾ ಕಟ್ ವಿವಾದ ತೀವ್ರವಾಗಿದೆ. ಇದರ ಬೆನ್ನಲ್ಲೇ ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ಸರ್ಕಾರದ ಪಶು ಸಂಗೋಪನಾ ಇಲಾಖೆ ಹೊರಡಿಸಿದೆ ಎನ್ನುವ ಸುದ್ದಿ ಶನಿವಾರ ಮಾದ್ಯಮಗಳಲ್ಲಿ ವೈರಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಶು ಸಂಗೋಪನಾ ಸಚಿವ ಪ್ರಭು ಚವಾಣ್, ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದಿದ್ದಾರೆ.

- Advertisement -

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಭು ಚವಾಣ್, ನಮ್ಮ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ, ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಪತ್ರದ ಬಗ್ಗೆ ಪರಿಶೀಲನೆ ನಡೆಸಿ, ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಂಘಪರಿವಾರ ಮತ್ತಿತರ ಹಿಂದುತ್ವ ಸಂಘಟನೆಗಳು ಯುಗಾದಿ ಹೊಸತೊಡಕಿನ ಮಧ್ಯೆ ಹಲಾಲ್-ಜಟ್ಕಾ ಕಟ್ ವಿವಾದವನ್ನು ಸೃಷ್ಟಿಸಿದೆ. ಈ ವಿವಾದದ ಬೆನ್ನಲ್ಲೇ ಪಶು ಸಂಗೋಪನಾ ಇಲಾಖೆ ಸ್ಟನ್ನಿಂಗ್ ಕಡ್ಡಾಯ ನಿಯಮದ ಆದೇಶ ಹೊರಡಿಸಿದೆ ಎಂದು ಮಾದ್ಯಮಗಳು ಪ್ರಸಾರ ಮಾಡಿತ್ತು. ಇದೀಗ ಪಶು ಸಂಗೋಪನಾ ಇಲಾಖೆ ಸಚಿವರು ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.



Join Whatsapp