ಕೇರಳ । ಪಾಪ್ಯುಲರ್ ಫ್ರಂಟ್ ವತಿಯಿಂದ ನೀರಿನ ಯೋಜನೆ ‘ಕನಿವು’ ಲೋಕಾರ್ಪಣೆ

Prasthutha|

ಕೊಟ್ಟಾಯಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಮ್ಯೂನಿಟಿ ಡೆವಲಪ್’ಮೆಂಟ್ ವಿಭಾಗದ ವತಿಯಿಂದ ಕೇರಳದ ಎರಟ್ಟುಪೆಟ್ಟಾದಲ್ಲಿ ‘ಕನಿವ್’ ಎಂಬ ಶೀರ್ಷಿಕೆಯಡಿ ನಿರ್ಮಿಸಲಾದ ಕುಡಿಯುವ ನೀರಿನ ಯೋಜನೆಯನ್ನು ಚೆಯರ್ ಮ್ಯಾನ್ ಒ.ಎಂ.ಎ. ಸಲಾಂ ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೈದರು.

- Advertisement -

ಸುಮಾರು 30 ಲಕ್ಷ ರೂ. ವೆಚ್ಚದ ಈ ಯೋಜನೆ ಕೊಟ್ಟಯಂ ಜಿಲ್ಲೆಯ ಎರಟ್ಟುಪೆಟ್ಟಾ ಪುರಸಭೆಯ 9,10,11 ಮತ್ತು 12ನೇ ವಿಭಾಗದ 500ಕ್ಕೂ ಅಧಿಕ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆಯ ಭಾಗವಾದ ನೀರಿನ ಟ್ಯಾಂಕನ್ನು ತೆವರುಪಾರದಲ್ಲಿ ಮತ್ತು ಬಾವಿಯನ್ನು ಕರೈಕ್ಕಾಡ್ ಮೀನಾಚಿಲಾರ್’ನ ದಡದಲ್ಲಿ ಶುಕ್ರವಾರ ಸಂಜೆ 4 ಉದ್ಘಾಟಿಸಲಾಯಿತು.

- Advertisement -

ನಡಕಲ್ ಹುದಾ ಜಂಕ್ಷನ್ ನಲ್ಲಿ ನಡೆದ ಉದ್ಘಾಟನಾ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ಸತ್ತಾರ್ ವಹಿಸಿದ್ದರು. ಸಂಸದ ಆ್ಯಂಟೋ ಆಂಟೋನಿ, SDPI ರಾಜ್ಯಾಧ್ಯಕ್ಷ ಮುವಾಟ್ಟುಪುಝ ಅಶ್ರಫ್ ಮೌಲವಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಲಯ ಕಾರ್ಯದರ್ಶಿ ಎಂ.ಎಚ್. ಶಿಹಾಸ್ ಸೇರಿದಂತೆ ಹಲವು ರಾಜಕೀಯ, ಸಾಮಾಜಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಯೋಜನೆಗೆ ಭೂಮಿ ನೀಡಿದ ಯೂಸುಫ್ ಪುಳಿಂತೊಟ್ಟಿಯಿಲ್ ಮತ್ತು ಶೇಖ್ ಮುಹಮ್ಮದ್ ಅವರನ್ನು ಸನ್ಮಾನಿಸಲಾಯಿತು.





Join Whatsapp