ಶಿವಮೊಗ್ಗ: ಸಂಘಪರಿವಾರದ ಕಾರ್ಯಕರ್ತರು, ಮಟನ್ ಸ್ಟಾಲ್ ಗೆ ಹೋಗಿ ಹಲಾಲ್ ಮಾಂಸ ಮಾರಾಟ ಮಾಡದಂತೆ ಅಂಗಡಿ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಹೊಸಮನೆ ಎಂಬಲ್ಲಿ ಹಲವು ವರ್ಷಗಳಿಂದ ಮಟನ್ ಅಂಗಡಿ ನಡೆಸುತ್ತಿರುವ ತೌಸೀಫ್ ಹಲ್ಲೆಗೊಳಗಾದವರು.
ಸಂಘಪರಿವಾರದ ಐದಕ್ಕೂ ಅಧಿಕ ಕಾರ್ಯಕರ್ತರು ತೌಸೀಫ್ ಅವರ ಅಂಗಡಿಗೆ ಬಂದು ಹಲಾಲ್ ಮಾಡದ ಮಾಂಸ ನೀಡುವಂತೆ ಕೇಳಿದ್ದಾರೆ. ಆತ ತೌಸೀಫ್, ಇಲ್ಲಿ ಹಲಾಲ್ ಮಾಡಿದ ಮಾಂಸ ಮಾತ್ರ ಇದೆ, ಹಲಾಲ್ ಮಾಡದ ಮಾಂಸ ಬೇಕಿದ್ದರೆ ಪಕ್ಕದ ಅಂಗಡಿಗೆ ಹೋಗುವಂತೆ ಹೇಳಿದ್ದಾರೆ.
ಅಷ್ಟಕ್ಕೇ ತೌಸೀಫ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
“ ಈ ಪ್ರದೇಶದಲ್ಲಿ ಶೇಕಡಾ 99ರಷ್ಟು ಮಂದಿ ಹಿಂದೂಗಳಿದ್ದಾರೆ. ಇಲ್ಲಿ ನೀನು ಅಂಗಡಿ ಇಟ್ಟಿದ್ದೀಯಾ, ಇಲ್ಲಿ ಮಾಂಸ ಮಾರಾಟ ಮಾಡಬೇಕಾದರೆ ಹಲಾಲ್ ಅಲ್ಲದ ಮಾಂಸ ಮಾತ್ರ ಮಾರಾಟ ಮಾಡಬೇಕು” ಎಂದು ಬೆದರಿಸಿದ್ದಾರೆ.
ಈ ಸಂಬಂಧ ವೀಡಿಯೋ ವೈರಲ್ ಆಗಿದೆ.
ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಐವರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಇದೇ ತಂಡ ಬೇರೊಂದು ಜನತಾ ಎಂಬ ಹೋಟೆಲ್ ಗೆ ಹೋಗಿ ಹಲಾಲ್ ಮಾಡದ ಮಾಂಸ ನೀಡುವಂತೆ ಗದ್ದಲವೆಬ್ಬಿಸಿ ಹೋಟೆಲ್ ಸಿಬ್ಬಂದಿ ಹಾಗೂ ಮುಸ್ಲಿಮ್ ಗ್ರಾಹಕನಿಗೂ ಹಲ್ಲೆ ನಡೆಸಿತ್ತು.