ದಿಲ್ಲಿ ಚಲೋ ಮಾರ್ಚ್| 12ಕ್ಕೂ ಹೆಚ್ಚು ಕೃಷಿ ಮುಖಂಡರನ್ನು ಬಂಧಿಸಿದ ಹರ್ಯಾಣ ಪೊಲೀಸರು| ಯೋಗೇಂದ್ರ ಯಾದವ್

Prasthutha|

ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26ರಂದು ನಡೆಯಲಿರುವ ‘ದೆಹಲಿ ಚಲೋ’ ಆಂದೋಲನಕ್ಕೆ ಮುಂಚಿತವಾಗಿ ಹರ್ಯಾಣ ಪೊಲೀಸರು ರಾಜ್ಯಾದ್ಯಂತ ಸುಮಾರು 12ಕ್ಕೂ ಹೆಚ್ಚು ರೈತ ಮುಖಂಡರನ್ನು ಬಂಧಿಸಿದ್ದಾರೆ ಎಂದು ಸ್ವರಾಜ್ ಭಾರತ ಅಧ್ಯಕ್ಷ ಯೋಗೇಂದ್ರ ಯಾದವ್ ಮಂಗಳವಾರ ಹೇಳಿದ್ದಾರೆ.

- Advertisement -

“ಬಂಧನಕ್ಕೊಳಗಾದ ಎಲ್ಲರನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಅವರ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲಾಗಿಲ್ಲ” ಎಂದು ಅವರು ಹೇಳಿದ್ದಾರೆ.

“ನಮ್ಮನ್ನು ಕೂಡ ಬಂಧಿಸಬಹುದು. ನಾವು ಭೇಟಿ ನೀಡುವ ಸ್ಥಳಗಳನ್ನು ನಾವು ಘೋಷಿಸಿದ್ದೇವೆ ಮತ್ತು ಪೊಲೀಸರು ನಮ್ಮನ್ನು ಬಂಧಿಸಬಹುದು. ಆದರೆ ನವೆಂಬರ್ 26ರ ಕಾರ್ಯಕ್ರಮ ನಡೆಯುತ್ತದೆ ” ಎಂದು ಯಾದವ್ ಹೇಳಿದರು.

- Advertisement -

ಪ್ರತಿಭಟನಕಾರರು ಶಾಂತಿಯುತ ವಿಧಾನಗಳನ್ನು ಬಳಸಿ ಆಂದೋಲನ ನಡೆಸುತ್ತಿದ್ದಾರೆ ಮತ್ತು ಪ್ರತಿಭಟನೆಯಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಸರಕಾರ ನಾಯಕರನ್ನು ಬಂಧಿಸುತ್ತಿದೆ ಎಂದು ಆರೋಪಿಸಿದರು. ತಾನು ಮತ್ತು ಇತರ ರೈತ ಮುಖಂಡರನ್ನು ಬಂಧಿಸಿದರೂ ಯಾವುದೇ ಹಿಂಸಾತ್ಮಕ ವಿಧಾನಗಳಿಗೆ ಆಶ್ರಯಿಸಬಾರದು ಎಂದು ಅವರು ರೈತರನ್ನು ಕೋರಿದರು.

ಈತನ್ಮಧ್ಯೆ, ಹೊಸ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಡಿಸೆಂಬರ್ 3ರಂದು ಎರಡನೇ ಸುತ್ತಿನ ಮಾತುಕತೆಗೆ ಕೇಂದ್ರ ಸರಕಾರವು ಪಂಜಾಬ್‌ ನಿಂದ ರೈತರ ಸಂಘಗಳನ್ನು ಆಹ್ವಾನಿಸಿದೆ ಎಂದು ಪಿಟಿಐ ವರದಿ ಮಾಡಿದೆ.



Join Whatsapp