ಹಲಾಲ್ ಮಾಂಸ ನಿಷೇಧ; ಆಹಾರ ಆಯ್ಕೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ: ಆರ್.ಆಶೋಕ್

Prasthutha|

ಬೆಂಗಳೂರು: ಹಲಾಲ್ ಮಾಂಸವನ್ನು ನಿಷೇಧಿಸುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವ ಮಧ್ಯೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಆಶೋಕ್, ಆಹಾರ ಪದ್ಧತಿ ಜನರ ವೈಯಕ್ತಿಕ ಆಯ್ಕೆಯಾಗಿದೆ. ಈ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಹಲಾಲ್ ಮಾಂಸದ ವಿಚಾರದಲ್ಲಿ ಈ ಹೊಸ ಬೆಳವಣಿಗೆ ಒಳ್ಳೆಯದಲ್ಲ. ಆಹಾರವು ಜನರ ವೈಯಕ್ತಿಕ ಆದ್ಯತೆ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಜನರು ಏನು ಖರೀದಿಸುತ್ತಾರೆ ಮತ್ತು ಎಲ್ಲಿಂದ ಖರೀದಿಸುತ್ತಾರೆ ಎಂಬುದನ್ನು ನಿರ್ಧರಿಸುವುದು ನಾಗರಿಕರಿಗೆ ಬಿಟ್ಟ ವಿಚಾರ. ಈ ಆಯ್ಕೆಯನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಲಾಲ್ ಮಾಂಸದ ಬಗ್ಗೆ ಎದ್ದಿರುವ ಗಂಭೀರ ಆಕ್ಷೇಪಗಳನ್ನು ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ ಒಂದು ದಿನದ ಬಳಿಕ ಆರ್. ಅಶೋಕ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

- Advertisement -

ಕೆಲವು ಹಿಂದುತ್ವ ಪರ ಗುಂಪುಗಳು ಹಲಾಲ್ ಮಾಂಸವನ್ನು ನಿಷೇಧಿಸುವಂತೆ ಕರೆ ನೀಡಿದ್ದು, ಇದೀಗ ವಿವಾದ ಸೃಷ್ಟಿಸಿದೆ.



Join Whatsapp