ಮೂಡಿಗೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವತಿಯಿಂದ “ಸ್ವಾಭಿಮಾನದ ರಾಜಕೀಯಕ್ಕಾಗಿ SDPI ಸೇರಿರಿ” ಕಾರ್ಯಕ್ರಮವು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ SDPI ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಬಿ.ಆರ್ ಭಾಸ್ಕರ್ ಪ್ರಸಾದ್ ರವರು ಮಾತನಾಡಿ ಪ್ರಸ್ತುತ ಹಾಗೂ ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ವಿಚಾರ ಮಂಡಿಸಿ ಸ್ವಾಭಿಮಾನದ ರಾಜಕೀಯಕ್ಕಾಗಿ, ಸದೃಢ ಭವಿಷ್ಯ ನಿರ್ಮಾಣಕ್ಕಾಗಿ SDPI ಸೇರಿರಿ ಎಂದು ಸವಿಸ್ತಾರವಾಗಿ ವಿವರಿಸಿದರು.
SDPI ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಗೌಸ್ ಮುನೀರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ SDPI ಪಕ್ಷದ ಅವಶ್ಯಕತೆಯ ಬಗ್ಗೆ ವಿವರಿಸಿದರು.
SDPI ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯವರಾದ ಬಿ.ಆರ್ ಭಾಸ್ಕರ್ ಪ್ರಸಾದ್ ರವರ ಸಮ್ಮುಖದಲ್ಲಿಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು 35 ಕ್ಕೂ ಹೆಚ್ಚು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ SDPI ಚಿಕ್ಕಮಗಳೂರು ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷ, ಪ್ರಧಾನ ಕಾರ್ಯದರ್ಶಿ ಜಮೀಲ್ ಖಾನ್, ಜಿಲ್ಲಾ ಕೋಶಾಧಿಕಾರಿ ಕೆ.ಪಿ ಖಾಲಿದ್, ಜಿಲ್ಲಾ ಸಮಿತಿ ಸದಸ್ಯರಾದ ಸಿಕಂದರ್ ಪಾಷ, SDPI ಮೂಡಿಗೆರೆ ವಿಧಾನಸಭಾ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿ ಶರೀಫ್ ಎಂ.ಯು, ಕೋಮು ಸೌಹಾರ್ದ ವೇದಿಕೆಯ ಗೌಸ್ ಮೊಹಿದ್ದೀನ್, ಸಮಾಜ ಸೇವಕರಾದ ಅಲ್ತಾಫ್ ಬಿಳಗುಳ, ದಲಿತ ನಾಯಕರಾದ ಸುಂದ್ರೇಶ್, ಪ್ರಮುಖರಾದ ಸಿಪ್ರಿಯನ್ ರಿಚರ್ಡ್ ಸಿಕ್ವೇರ, ಜಾಬೀರ್, ಜಾಕೀರ್, ಇಲ್ಯಾಸ್, ಆಬೀದ್, ಅಣ್ಣು, ರಫೀಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.