ಗುಜರಾತ್ । 30 ವರ್ಷಗಳ ಬಳಿಕ ಸಂಜೀವ್ ಭಟ್ ವಿರುದ್ಧದ ಪ್ರಕರಣ ವಾಪಸ್ ಪಡೆದ ದೂರುದಾರ

Prasthutha|

ಸೂರತ್: 1990 ರ ಪೊಲೀಸ್ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಮಾಜಿ ಐಪಿಸಿ ಅಧಿಕಾರಿ ಸಂಜೀವ್ ಭಟ್ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಸುಮಾರು 30 ವರ್ಷಗಳ ಬಳಿಕ ದೂರುದಾರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆಂದು timesofindia.com ಪೋರ್ಟಲ್ ನಲ್ಲಿ ವರದಿ ಆಗಿದೆ.

- Advertisement -

ಸದ್ಯ ಘಟನೆಯ ಕುರಿತ ವಿಚಾರಣೆಯು ಗುಜರಾತ್ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ದೂರು ರದ್ದುಗೊಳಿಸುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಮೂರ್ತಿ ನಿಖಿಲ್ ಕರಿಯೆಲ್ ಅವರು ದೂರುದಾರ ಮಹೇಶ್ ಚಿತ್ರೋಡಾ ಎಂಬಾತನಿಗೆ ವಕೀಲರ ಮೂಲಕ ಅಫಿದವಿತ್ ಸಲ್ಲಿಸಲು ಸೂಚಿಸಿದ್ದಾರೆ. ಮುಂದಿನ ವಿಚಾರಣೆಯು ಮಾರ್ಚ್ 31 ರಂದು ನಡೆಯಲಿದೆ ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಅಂಶಗಳು ದಾಖಲೆಗಳ ಮೂಲಕ ಸಲ್ಲಿಸುವಂತಾಗಲಿ. ಈ ವಿಚಾರದಲ್ಲಿ ಸಾಕಷ್ಟು ಕಾದಿದ್ದೇವೆ. ಅಷ್ಟೊಂದು ಸಮಯದಲ್ಲಿ ಇನ್ನಿತರ ರಚನಾತ್ಮಕ ಕೆಲಸ ಕೈಗೊಳ್ಳ ಬಹುದಾಗಿತ್ತು. ಮುಂದಕ್ಕೆ ಅಫಿದವಿತ್ ಸಲ್ಲಿಸುವವರೆಗೆ ಕಾಯೋಣ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.

- Advertisement -

ಸದ್ಯ ಪೊಲೀಸ್ ಕಸ್ಟಡಿ ಸಾವು ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಭಟ್ ಅವರು ಜೀವಾವಧಿ ಶಿಕ್ಷೆ ಅಡಿಯಲ್ಲಿ ಜೈಲಿನಲ್ಲಿದ್ದಾರೆ.




Join Whatsapp