ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿರುವ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕಿದೆ: ಹಾರಿಸ್ ನಲಪಾಡ್

Prasthutha|

ಮಂಗಳೂರು : ದೇಶದ ಸೌಹಾರ್ದತೆಗೆ ಕಾಂಗ್ರೆಸ್ ಪಕ್ಷ ಮಹತ್ವದ ಕೊಡುಗೆ ನೀಡಿದ್ದು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಹಾರಿಸ್ ನಲಪಾಡ್ ಹೇಳಿದರು.

- Advertisement -

ನಗರದ ಬೆಂದೂರ್ ವೆಲ್ ನ ಸೈಂಟ್ ಸೆಬಾಸ್ಟಿನ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಯುವ ಜಾಗೃತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಪ್ರಾಣತ್ಯಾಗ ಮಾಡಿರುವ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕಿದೆ. ಪಕ್ಷದ ಬಲವರ್ಧನೆಗೆ ಸದಸ್ಯರ ಬಲ ಹೆಚ್ಚಬೇಕಿದೆ ಎಂದು ಹೇಳಿದರು.

ಪಕ್ಷದ ಯುವಕರಿಗೆ ನಾಯಕತ್ವ ವಹಿಸಲು ಹಿರಿಯರು ಅವಕಾಶ ನೀಡಬೇಕು ಕಾಂಗ್ರೆಸ್ ನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

- Advertisement -

ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಸಮಾಜವನ್ನು ಒಡೆಯುತ್ತಿರುವಾಗ ಬಾಬಾ ಸಾಹೇಬರ ನೇತೃತ್ವದ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಹೋರಾಡಬೇಕಾಗಿದೆ. ಬಿಜೆಪಿ ಈ ಸಮಾಜವನ್ನು ಒಡೆಯುತ್ತಿದ್ದರೆ, ಕಾಂಗ್ರೆಸ್ ಸಮಾಜವನ್ನು ಒಂದು ಗೂಡಿಸಲು ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಯುವ ಸಮುದಾಯ ಒಂದಾಗಬೇಕಾಗಿದೆ ಎಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದರು.




Join Whatsapp