ಛತ್ತೀಸ್‌ಗಢ: ಬಲವಂತದ ಮತಾಂತರದ ನೆಪದಲ್ಲಿ ವಿ.ಎಚ್.ಪಿ ಕಾರ್ಯಕರ್ತರ ಗುಂಪೊಂದು ಕ್ರಿಶ್ಚಿಯನ್ ಆರಾಧನಾಲಯಕ್ಕೆ ನುಗ್ಗಿ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದ ಇಬ್ಬರು ಪಾದ್ರಿಗಳು ಸೇರಿದಂತೆ ನೆರೆದವರಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಛತ್ತೀಸ್‌ಗಢದ ರಜೌತಿ ಗ್ರಾಮದಿಂದ ವರದಿಯಾಗಿದೆ.
ಮಾತ್ರವಲ್ಲ ದಾಳಿ ನಡೆಸಿದ ಸಂಘಪರಿವಾರದ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಹಲ್ಲೆಗೊಳಗಾದ ಸಂತ್ರಸ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹೇಳಲಾಗಿದೆ.
ಕ್ರಿಸ್ಟೋಫರ್ ಟಿರ್ಕಿ ಮತ್ತು ಜ್ಯೋತಿ ಪ್ರಕಾಶ್ ಟೊಪ್ಪೊ ಎಂಬವರೇ ಹಲ್ಲೆಗೊಳಗಾದ ಪಾದ್ರಿಗಳಾಗಿದ್ದು, ವಿ.ಎಚ್.ಪಿ ನೀಡಿದ್ದ ದೂರಿನನ್ವಯ ಇವರ ಮೇಲೆಯೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.
ಸದ್ಯ ಸಂತ್ರಸ್ತ ಪಾದ್ರಿಗಳ ವಿರುದ್ಧ ಐಪಿಸಿ ಸೆಕ್ಷನ್ 295 ಎ, 34 ಮತ್ತು ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಜಶ್ಪುರ ಉಪ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುನ್ವಾರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.