ಕಾಸರಗೋಡು: ತುಂಬು ಗರ್ಭಿಣಿ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡು ಪೇಟೆಯಲ್ಲಿ ನಡೆದಿದೆ. ಕೊಟ್ಟಚೇರಿಯ ಎಲೈಟ್ ಹೋಟೆಲ್ ಗೆ ಸೇರಿದ ಈ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿತ್ತು.
ಈ ಸಂಬಂಧ ಹೊಟೇಲ್ ಉದ್ಯೋಗಿ ಸೆಂಥಿಲ್ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯ ರಾತ್ರಿ 1.30ರ ಸುಮಾರಿಗೆ ಹೊಟೇಲ್ನ ನೌಕರರಿಗೆ ಹಿತ್ತಲಿನಲ್ಲಿ ಎರಡು ಮೇಕೆಗಳ ಗಲಾಟೆ ಸದ್ದು ಕೇಳಿಸಿದೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ, ಮೂವರು ಗೋಡೆ ಹಾರಿ ಪರಾರಿಯಾಗುವುದು ಕಂಡು ಬಂದಿದೆ.
ಈ ವೇಳೆ ನಾನಿ ಎಂಬ ಗರ್ಭಿಣಿ ಮೇಕೆ ಸತ್ತು ಬಿದ್ದಿತ್ತು. ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರುಹುಗಳೂ ಕಂಡುಬಂದಿವೆ. ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸೆಂಥಿಲ್ ನನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಸೆಂಥಿಲ್ ಮೂರೂವರೆ ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬಂದಿದ್ದ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.