ಆನ್ಲೈನ್ ಗೇಮಿಂಗ್ ನಿಷೇಧ: ಸುಪ್ರೀಂ ಕೋರ್ಟ್ ಮೊರೆ ಹೋದ ಕರ್ನಾಟಕ ಸರ್ಕಾರ

Prasthutha|

ನವದೆಹಲಿ: ಆನ್ ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಗೆ ಕಡಿವಾಣ ಹಾಕುವ ತನ್ನ ಕಾನೂನನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್  ಮೊರೆ ಹೋಗಿದೆ ಮತ್ತು ಆನ್ಲೈನ್ ಗೇಮಿಂಗ್ನಿಂದ ಸಾವಿರಾರು ಕುಟುಂಬಗಳು ನಾಶವಾಗುತ್ತಿವೆ ಮತ್ತು ಅನೇಕರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಕಾರಣ ಕಾನೂನಿನ ಅಗತ್ಯವಿದೆ ಎಂದು ಹೇಳಿದೆ.

- Advertisement -

ವಕೀಲ ಶುಭ್ರಾಂಶು ಪಾಧಿ ಮೂಲಕ ಸಲ್ಲಿಸಿದ ವಿಶೇಷ ಅರ್ಜಿಯಲ್ಲಿ ರಾಜ್ಯವು  ಆನ್ ಲೈನ್ ಗೇಮಿಂಗ್ ನಿಂದ ಆಗುವ ಸಮಸ್ಯೆಗಳ ಕುರಿತು ಕೆಲವೊಂದು ಘಟನೆಗಳೊಂದಿಗೆ ವಿವರಿಸಿದೆ.

 ಆನ್ ಲೈನ್ ಗೇಮಿಂಗ್ ಮತ್ತು ಪಂತವನ್ನು ನಿಷೇಧಿಸುವಂತೆ ಕೋರಿ ಕಳೆದ ವರ್ಷ ಹೈಕೋರ್ಟ್ ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಹೈಕೋರ್ಟ್ ರದ್ದು ಗೊಳಿಸಿತ್ತು.



Join Whatsapp