ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ !

Prasthutha|

►► ಸಿಸಿಟಿವಿ ಕ್ಯಾಮೆರಾ, ಬ್ಯಾರಿಕೇಡ್ ಗಳನ್ನು ಧ್ವಂಸಗೈದ ಕಾರ್ಯಕರ್ತರು

- Advertisement -

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಸಿಸಿಟಿವಿ, ಭದ್ರತೆಗಾಗಿ ಇಟ್ಟಿದ್ದ ಬ್ಯಾರಿಕೇಡ್ ಗಳನ್ನು ಧ್ವಂಸಗೈದಿದ್ದಾರೆ. ದೆಹಲಿ ಪೊಲೀಸರ ಸಮ್ಮುಖದಲ್ಲೇ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಗಲಭೆಗೆ ಯತ್ನಿಸಿದ್ದಾರೆಂದು ಆಪ್ ದೂರಿದೆ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಯ ಗೆಲುವಿನಿಂದ ಬಿಜೆಪಿ ಕಂಗೆಟ್ಟಿದೆ. ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಸಂಚು ರೂಪಿಸಿದ್ದು, ಪ್ರಧಾನಿ ಮೋದಿಯನ್ನು ಎದುರಿಸಲು ಕೇಜ್ರಿವಾಲ್ ರಿಂದ ಮಾತ್ರ ಸಾಧ್ಯ ಎಂದು ಬಿಜೆಪಿಗೆ ಮನದಟ್ಟಾದ ಕಾರಣ ದೆಹಲಿ ಪೊಲೀಸರ ಸಮ್ಮುಖದಲ್ಲೇ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತದೆ ಎಂದು ಆಪ್ ಆರೋಪಿಸಿದೆ.

- Advertisement -

ದೆಹಲಿ ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಗೂಂಡಾಗಳು ಮುಖ್ಯಮಂತ್ರಿ ನಿವಾಸಕ್ಕೆ ದಾಳಿ ನಡೆಸಿ ಕ್ಯಾಮರಾ, ಬ್ಯಾರಿಕೇಡ್ ಧ್ವಂಸಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲವು ಪ್ರತಿಭಟನಕಾರರು ಬ್ಯಾರಿಕೇಡ್ ಗಳನ್ನು ಧ್ವಂಸ ಮಾಡಿ ಮುಖ್ಯಮಂತ್ರಿಯವರ ನಿವಾಸದ ಎದುರು ಗೊಂದಲ ಸೃಷ್ಟಿಸಿ ಘೋಷಣೆ ಕೂಗಿದರು. ಬಳಿಕ ಅವರು ತಂದಿದ್ದ ಬಣ್ಣವನ್ನು ನಿವಾಸಕ್ಕೆ ಎರಚಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಸುಮಾರು 70 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಉತ್ತರ ದೆಹಲಿ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.




Join Whatsapp