ಭಾವನಾತ್ಮಕ ವಿಚಾರಗಳೇ ಬಿಜೆಪಿಗೆ ಬಂಡವಾಳ; ಬೇಡದ ವಿಚಾರಗಳನ್ನು ಎತ್ತುವುದು ಮಾತ್ರ ಬಿಜೆಪಿ ಕೆಲಸ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಕಳೆದ ಹಲವು  ದಿನಗಳಿಂದ ಕೆಲವೊಂದು ಸಂಘಟನೆಗಳು ಇತರ ಸಮುದಾಯಗಳ ಜೊತೆ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿವೆ. ಸಣ್ಣ ಪುಟ್ಟ ವ್ಯಾಪಾರಕ್ಕೆ ತೊಂದರೆಯಿದೆ ಎಂದಾದರೆ ಪ್ರಧಾನಿ ಮೋದಿ ಮುಸ್ಲಿಂ ದೇಶಗಳ ಜತೆ ಮಾಡುತ್ತಿರುವ ವ್ಯಾಪಾರ ನಿಲ್ಲಿಸಲಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

- Advertisement -

ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ‘ವ್ಯಾಪಾರಸ್ಥರು ಭಾರತ ದೇಶದವರಲ್ವಾ? ಇದು 40% ಸರ್ಕಾರ. ಹಿರೋಯಿನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡೋದಕ್ಕೆ, ಕಾಶ್ಮೀರ ಫೈಲ್ ನಿರ್ದೇಶಕರಿಗೆ ಗೌರವಿಸಲು ಮೋದಿ ಅವರಿಗೆ ಸಮಯವಿದೆ. ಕರ್ನಾಟಕದ ಗುತ್ತಿಗೆದಾರರು ಕೊಟ್ಟ ದೂರಿಗೆ ಪ್ರತಿಕ್ರಿಯಿಸುವುದಕ್ಕೆ ಸಮಯ ಇಲ್ಲವೇ’ ಎಂದು ಪ್ರಶ್ನಿಸಿದರು.

ನೀವು ನಮ್ಮ ನಾಡಗೀತೆಯನ್ನು ಓದಿ. ಅದರಲ್ಲಿ ಕುವೆಂಪು ಅವರು ಏನು ಬರೆದಿದ್ದಾರೆ ಎಂದು ಓದಿ. ನಿಮ್ಮ ಹೈಕಮಾಂಡ್ ಮನವೊಲಿಸಲು ರಾಜ್ಯದ ಸಾಮರಸ್ಯ ಹಾಳು ಮಾಡಬೇಡಿ ಎಂದು ಹೇಳಿದರು .

- Advertisement -

ಈಗ ಹಲಾಲ್ ಕಟ್,ಜಟಕಾ ಕಟ್ ನಡೆಯುತ್ತಿದೆ. ಭಾವನಾತ್ಮಕ ವಿಚಾರಗಳೇ ಬಿಜೆಪಿಗೆ ಬಂಡವಾಳ. ಬೇಡದ ವಿಚಾರಗಳನ್ನು ಎತ್ತುವುದು ಮಾತ್ರ ಬಿಜೆಪಿ ಕೆಲಸ. ಚುನಾವಣೆ ಬಂದಾಗ ಮಾತ್ರ ‌ಇಂತಹ ವಿಚಾರ ಎತ್ತುತ್ತೀರಿ.  ಬಿಜೆಪಿ ನಾಯಕ ಆರ್ಥಿಕ ಜಿಹಾದ್ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ.ಬೊಮ್ಮಾಯಿ‌, ಮೋದಿಯವರು ಬಜೆಟ್ ನಲ್ಲಿ ಸರ್ವಸ್ಪರ್ಶಿ, ಸರ್ವವ್ಯಾಪಿ ಅಂತ ಚೆಂದ ಹೆಸರು ಕೊಟ್ಟಿದ್ದಾರೆ. ಅವರು ಭ್ರಷ್ಟಾಚಾರ ದಲ್ಲಿ ಸರ್ವವ್ಯಾಪಿ ಆಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಜಿಹಾದ್ ನಡೆಯುತ್ತಿದೆ. ಶಿಕ್ಷಣ, ದಲಿತರು, ಮಹಿಳೆಯರು, ಹಿಂದುಳಿದವರ ಬಲವರ್ಧನೆ ಮಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಸಿಎಂ‌ ಲಿಬರಲ್ ಇದ್ದಾರೆ ಅಂತ ಅವರ ಮೇಲೆ ನನಗೆ ಗೌರವ ಇತ್ತು. ಆದರೆ ಅವರ ನಡೆ ನುಡಿಗೆ ವ್ಯತ್ಯಾಸ ಇದೆ. ಇವತ್ತಿನ ಬೆಳವಣಿಗೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಬಂಡವಾಳ ಹೂಡಿಕೆ ಸಮಾವೇಶ ಮಾಡುತ್ತಿದ್ದೀರಿ. ಇಂತಹ ಕಲುಷಿತ ವಾತಾವರಣ ಇದ್ದರೆ ಯಾವ ಬಂಡವಾಳವೂ ಬರುವುದಿಲ್ಲ. ಭಾರತವನ್ನು ಪಾಕಿಸ್ತಾನ ಮಾಡುತ್ತಿದ್ದೀರಾ? ಕರ್ನಾಟಕವನ್ನು ಯುಪಿ ಮಾಡುತ್ತಿದ್ದೀರಾ?  ಎಂದು ಕಿಡಿ ಕಾರಿದರು.

ಮೇಕ್ ಇಂಡಿಯಾ ಎಂದು ಹೇಳಿ ಫೇಕ್ ಇನ್ ಇಂಡಿಯಾ ಮಾಡುತ್ತಿದ್ದೀರಿ. ವಾಟ್ಸಪ್, ಫೇಸ್ ಬುಕ್ ನಲ್ಲಿ ಸುಲ್ಳು ಸಂದೇಶ ಕಳುಹಿಸುವುದು, ಮುಖ್ಯಮಂತ್ರಿಗಳೇ ಆ ಮೌನ ಯಾಕೆ? ರಾಜ್ಯದ ಪ್ರಗತಿ ತ್ಯಾಗ ಮಾಡುವಷ್ಟು ಕುರ್ಚಿ ಮೇಲೆ ವ್ಯಾಮೋಹವೇ? ಅವರು ಈ ಹಿಂದೆ ಈ ರೀತಿ ಇರಲಿಲ್ಲ. ಬಿಜೆಪಿಯಲ್ಲಿ ಹೈಕಮಾಂಡ್ ಮನವೊಲಿಸುವ ಸ್ಪರ್ಧೆಗೆ ಇಳಿದಿದ್ದಾರೆ. ಸ್ಪೀಕರ್ ಅವರು ತಮ್ಮ ಸ್ಥಾನದಲ್ಲಿ ಕೂತು ನಾನು ಆರ್ ಎಸ್ಎಸ್ ನಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ಆರ್ ಎಸ್ಎಸ್ ಇತಿಹಾಸ ಅವರಿಗೆ ಗೊತ್ತಿದೆಯೇ? ರಾಮಲೀಲಾ ಮೈದಾನದಲ್ಲಿ 150 ಪ್ರತಿಭಟನೆ ಮಾಡಿ ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು ಹೇಳಿ ಸಂವಿಧಾನ ಸುಟ್ಟಿರುವ ಇತಿಹಾಸವಿದೆ ಎಂದು ಹೇಳಿದರು .

ಬಿಜೆಪಿ ಮುಂಖಡರೇ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ. ದೊಡ್ಡ ದೊಡ್ಡವರನ್ನ ಬೇಟೆ ಯಾಡಿ. ಮೋದಿಯವರ ಬಳಿ ಹೋಗಿ‌ ಮಾತಾಡಿ. ನಿಮಗೆ ಲಾಭ ಇದ್ದಾಗ ಮಾತ್ರ ಹಿಂದುಳಿದವರ ಬಗ್ಗೆ ಕಾಳಜಿವಹಿಸಿತ್ತೀರಿ. ಸರ್ಕಾರ ಮುಸ್ಲಿಂ ಅಷ್ಟೇ ಅಲ್ಲ, ಎಲ್ಲ ಸಮುದಾಯಗಳ ಮೇಲೆ ಜಿಹಾದ್ ಮಾಡುತ್ತಿದೆ. ಗಂಗಾಕಲ್ಯಾಣ ಯೋಜನೆ ಅವ್ಯವಹಾರ ಆಗಿದೆ. ಒಂದೇ ಬೋರ್ ಗೆ ಎರಡು ವಿಧದ ಅನುದಾನ ನೀಡುತ್ತಿದ್ದಾರೆ. ರೇಣುಕಾಚಾರ್ಯ ಫೇಕ್ ಎಸ್ ಟಿ ಸರ್ಟಿಫಿಕೇಟ್ ಕೂಡ ಪಡೆದಿದ್ದಾರೆ. ಇದು ಸಂವಿಧಾನದ ವಿರುದ್ಧ ಜಿಹಾದ್ ಅಲ್ಲವೇ ಎಂದು ತೀವ್ರ ವಾಗ್ದಾಳಿ ನಡೆಸಿದರು.




Join Whatsapp