ಹಸಿವಿನ ಮುಂದೆ ಯಾವ ಧರ್ಮವೂ ನಿಲ್ಲಲಾರದು: ಹಲಾಲ್ ಚರ್ಚೆಯ ಬಗ್ಗೆ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಸಂಘಪರಿವಾರ ಮತ್ತು ಬಲಪಂಥೀಯ ಸಂಘಟನೆಗಳು ಶುರುಹಚ್ಚಿರುವ ಹಲಾಲ್ ನಿಷೇಧ ಅಭಿಯಾನದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮನುಷ್ಯನ ಹಸಿವಿನ ಮುಂದೆ ಯಾವ ಧರ್ಮವೂ ನಿಲ್ಲಲಾರದು ಎಂದಿದ್ದಾರೆ.

- Advertisement -

ಟ್ವೀಟ್ ಮೂಲಕ ಹೇಳಿಕೆ ನೀಡಿರುವ ಮಹದೇವಪ್ಪ ಮನುಷ್ಯನಲ್ಲಿ ಒಳ್ಳೆಯತನ ಇದ್ದರೆ ಕುಂಕುಮವೂ ಸಮಸ್ಯೆಯಲ್ಲ, ಹಿಜಾಬ್, ಹಲಾಲ್ ಯಾವುದೂ ಕೂಡಾ ಸಮಸ್ಯೆಯಲ್ಲ. ಇಲ್ಲಿ ಗುಡಿಯೂ ಸಮಸ್ಯೆಯಲ್ಲ, ಚರ್ಚು, ಮಸೀದಿ ಯಾವುದೂ ಸಮಸ್ಯೆಯಲ್ಲ. ಮೌಢ್ಯ ರಹಿತವಾದ ವೈಜ್ಞಾನಿಕ ಆಚರಣೆಗಳನ್ನು ಎಲ್ಲ ಧರ್ಮದವರೂ ಗೌರವಿಸಬೇಕು. ಇಷ್ಟವಿದ್ದರೆ ಭಾಗಿಯಾಗಬೇಕು. ಇನ್ನು ಮನುಷ್ಯನ ಹಸಿವಿನ ಮುಂದೆ ಯಾವ ಧರ್ಮವೂ ನಿಲ್ಲಲಾರದು ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ಮೂಲಕ, ಈ ದಿನ ದೇಶದ ಆಮ್ಲಜನಕವಾಗಿರುವ ಪ್ರಜಾಪ್ರಭುತ್ವದ ಉಸಿರಾಡಬೇಕಾದ ಮನುಷ್ಯ ವಿರೋಧಿಗಳು ದ್ವೇಷದ ವಿಷವನ್ನೇ ಉಸಿರಾಡುತ್ತಿದ್ದು ಅವರೇನು ಮಾನಸಿಕವಾಗಿ ಉಳಿಯುವಂತಹ ಲಕ್ಷಣ ಕಾಣುತ್ತಿಲ್ಲ. ಇಂತವರಿಂದ ಬಾಬಾ ಸಾಹೇಬರ ಪ್ರಯತ್ನಗಳಿಗೆ ಸೋಲಾಗಬಾರದು ಎಂದು ಹೇಳಿದ್ದಾರೆ.



Join Whatsapp