ತ್ರಿಪುರಾ । ಸಂಘಪರಿವಾರದಿಂದ ಮುಸ್ಲಿಮ್ ಯುವಕನ ಗುಂಪುಹತ್ಯೆ; ಇಬ್ಬರ ಬಂಧನ

Prasthutha|

ಅಗರ್ತಲಾ: ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವಕನೊಬ್ಬನನ್ನು ಗುಂಪುಹತ್ಯೆ ನಡೆಸಿದ ಘಟನೆ ತ್ರಿಪುರಾದ ಸೆಪಾಹಿಜಾಲಾ ಜಿಲ್ಲೆಯಿಂದ ವರದಿಯಾಗಿದೆ.

- Advertisement -

26 ವರ್ಷದ ಲಿತಾನ್ ಮಿಯಾ ಎಂಬಾತನನ್ನು ಹಸು ಕಳ್ಳತನ ಆರೋಪದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ನೀಡಿದ ದೂರಿನ ಆಧಾರದಲ್ಲಿ ತಾರಾಪುಕೂರ್ ನಿವಾಸಿಗಳಾದ ಸೆಂತು ದೇಬನಾಥ್ ಮತ್ತು ಅಮಲ್ ಚಂದ್ರ ದಾಸ್ ಎಂಬವರನ್ನು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸೋನಮುರಾ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಬನೋಜ್ ಬಿಪ್ಲಬ್ ದಾಸ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

- Advertisement -

ದಾಳಿಕೋರರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಲಿತಾನ್ ಮಿಯಾ ಎಂಬಾತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಂದು ಜತ್ರಪುರ ಪೊಲೀಸ್ ಠಾಣೆಯ ನಂದನ್ ದಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.




Join Whatsapp