ಸನ್’ರೈಸರ್ಸ್ ಗೆಲುವಿಗೆ 211ರನ್ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

Prasthutha|

ಮುಂಬೈ: ಐಪಿಎಲ್ 15ನೇ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ, ರಾಜಸ್ಥಾನ ರಾಯಲ್ಸ್ 211ರನ್ ಗಳ ಕಠಿಣ ಗುರಿ ನೀಡಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ಸ್, ನಾಯಕ ಸಂಜು ಸ್ಯಾಮ್ಸನ್ ಸಿಡಿಸಿದ ಆಕರ್ಷಕ ಅರ್ಧಶತಕ ಮತ್ತು ಪಡಿಕ್ಕಲ್ ಹಾಗೂ ಹೆಟ್ಮೇರ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟದಲ್ಲಿ 210 ರನ್ ಗಳಿಸಿದೆ.

- Advertisement -

ದುಬಾರಿಯಾದ ನೋಬಾಲ್, ಕ್ಯಾಚ್ ಡ್ರಾಪ್ !

ಅನುಭವಿ ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್’ನಲ್ಲೇ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜಾಸ್ ಬಟ್ಲರ್ ಖಾತೆ ತೆರೆಯುವ ಮೊದಲೇ ಸ್ಲಿಪ್ ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಟಿವಿ ರೀಪ್ಲೇನಲ್ಲಿ ಅದು ನೋಬಾಲ್ ಎಂದು ಘೋಷಿಸಲಾಯಿತು.
ನಾಲ್ಕನೇ ಓವರ್’ನ 4ನೇ ಎಸೆತದಲ್ಲಿ ಉಮ್ರಾನ್ ಮಲಿಕ್ 150 ಕಿಮೀ ವೇಗದಲ್ಲಿ ಎಸೆದ ಚೆಂಡು ಬಟ್ಲರ್ ಬ್ಯಾಟ್’ನಿಂದ ಎಡ್ಜ್ ಆಗಿ ಸ್ಲಿಪ್‌ ನಲ್ಲಿದ್ದ ಅಬ್ದುಲ್ ಸಮದ್ ಕೈ ಸೇರಿತ್ತು. ಆದರೆ ಚೆಂಡಿನ ವೇಗವನ್ನು ಅಂದಾಜಿಸುವಲ್ಲಿ ವಿಫಲರಾದ ಸಮದ್ ಕ್ಯಾಚ್ ಕೈಚೆಲ್ಲಿದರು. ಎರಡು ಜೀವದಾನ ಪಡೆದ ಬಟ್ಲರ್, 28 ಎಸೆತಗಳನ್ನು ಎದುರಿಸಿ 35 ರನ್ ಗಳಿಸಿ ಉಮ್ರಾನ್ ಮಲಿಕ್’ಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಯಶಸ್ವಿ ಜೈಸ್ವಾಲ್ 20 ರನ್ ಗಳಿಸಿ ನಿರ್ಗಮಿಸಿದರು.
ಹೈದರಾಬಾದ್ ಪರ ಉಮ್ರಾನ್ ಮಲಿಕ್ ಮತ್ತು ಟಿ.ನಟರಾಜನ್ ತಲಾ ಎರಡು ವಿಕೆಟ್ ಪಡೆದರು.



Join Whatsapp