ಲಖಿಂಪುರ ಪ್ರಕರಣ: ಆಶಿಶ್ ಮಿಶ್ರಾ ಜಾಮೀನಿಗೆ ವಿರೋಧವಿದೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ UP ಸರ್ಕಾರ

Prasthutha|

ನವದೆಹಲಿ: ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ ಗೆ ತಿಳಿಸಿದೆ.

- Advertisement -

ಆರೋಪಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಸಾಕ್ಷಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ  ಸಂತ್ರಸ್ತ ಕುಟುಂಬಗಳ ಆರೋಪಗಳನ್ನು ಯುಪಿ ಸರ್ಕಾರ ತಳ್ಳಿ ಹಾಕಿದೆ.

ಲಖಿಂಪುರ ಖೇರಿ ಪ್ರಕರಣದಲ್ಲಿ ಆಶೀಷ್  ಮಿಶ್ರಾ ಜಾಮೀನನ್ನು ಪ್ರಶ್ನಿಸುವ ಮನವಿಗೆ ಪ್ರತಿಕ್ರಿಯೆಯಾಗಿ, ಉತ್ತರ ಪ್ರದೇಶ ಸರಕಾರವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉತ್ತರವನ್ನು ಸಲ್ಲಿಸಿತು. ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರವು “ಸಂಬಂಧಿತ ಅಧಿಕಾರಿಗಳ ಮುಂದೆ ಪರಿಗಣನೆಗೆ ಬಾಕಿಯಿದೆ” ಎಂದು ಹೇಳಿದೆ.

- Advertisement -

ಅಲಹಾಬಾದ್ ಹೈಕೋರ್ಟ್‌ ನಲ್ಲಿ ಉತ್ತರಪ್ರದೇಶ ಸರಕಾರ ಆಶಿಶ್ ಮಿಶ್ರಾಗೆ ಜಾಮೀನು ನೀಡುವುದನ್ನು ವಿರೋಧಿಸಿಲ್ಲ ಎಂಬ ಆರೋಪಗಳು ಸಂಪೂರ್ಣವಾಗಿ ಸುಳ್ಳು. ಜಾಮೀನು ಅರ್ಜಿಯನ್ನು ಉತ್ತರಪ್ರದೇಶ ಸರಕಾರ ತೀವ್ರವಾಗಿ ವಿರೋಧಿಸಿತು ಎಂದು ಅದು ಹೇಳಿದೆ.



Join Whatsapp