ಸರಕಾರಗಳು ಸಂವಿಧಾನ ವಿರೋಧಿಯಾಗಿವೆ: ನಟ ಚೇತನ್ ಅಹಿಂಸಾ

Prasthutha|

ಗಂಗಾವತಿ: ಸರಕಾರಗಳು ಶ್ರೀಮಂತರು, ಕಾರ್ಪೋರೇಟ್ ಗಳ  ಪರವಾಗಿದ್ದು ಬಡ, ಅಲೆಮಾರಿ ಮತ್ತು ಕೆಳ ವರ್ಗದವರ ವಿರೋಧಿಯಾಗಿವೆ ಎಂದು ನಟ ಚೇತನ್ ಅಹಿಂಸಾ ಹೇಳಿದರು.

- Advertisement -

ಹಿರೇಜಂತಗಲ್‌ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕೆಲ ಮೇಲ್ವರ್ಗದವರು ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಬದಿಗಿಟ್ಟು ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜನರಲ್ಲಿದ್ದ ಭಾವೈಕ್ಯತೆ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಶೋಷಿತರು ದಲಿತರ ಪರವಾಗಿ ಸಂವಿಧಾನದ ಆಶಯದಂತೆ ಸರಕಾರ ನಡೆಸುವಂತೆ ಪ್ರತಿಭಟನೆ ನಡೆಸಿದರೆ ದೇಶ ದ್ರೋಹದ ಪಟ್ಟ ಕಟ್ಟಲಾಗುತ್ತಿದೆ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಸಮಸ್ಯೆಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಸಿದ್ದಾಂತದಲ್ಲಿ ಪರಿಹಾರವಿದೆ. ಸಂವಿಧಾನವನ್ನು ಗಾಳಿಗೆ ತೂರಿ ಕೆಲವರು ಜಾತಿ ವೈಷಮ್ಯ ಮೆರೆಯುತ್ತಿದ್ದರೂ ಆಡಳಿತ ನಡೆಸುವವರು ಮೌನ ವಹಿಸಿ ಪಟ್ಟಭದ್ರರಿಗೆ ಬೆಂಬಲಿಸುತ್ತಿರುವುದು ನಾಚಿಗೇಡು ಎಂದು ಅವರು ಹೇಳಿದರು.



Join Whatsapp