ಬಿಜೆಪಿಯನ್ನು ಬೆಂಬಲಿಸಿದ ಮುಸ್ಲಿಂ ಯುವಕನ ಹತ್ಯೆ

Prasthutha|

ಲಕ್ನೋ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಪಕ್ಷದ ವಿಜಯವನ್ನು ಸಂಭ್ರಮಿಸಿದ್ದ ಎಂಬ ಕಾರಣಕ್ಕೆ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಬಾಬರ್‌ ಅಲಿ(25) ಹತ್ಯೆಗೊಳಗಾದ ಯುವಕ. ಈತ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಲ್ಲದೆ, ಫ‌ಲಿತಾಂಶ ಹೊರಬಿದ್ದ ಕೂಡಲೇ ಸುತ್ತಮುತ್ತಲಿನ ಮನೆಯವರಿಗೆಲ್ಲ ಸಿಹಿ ಹಂಚಿದ್ದ. ಈ ಹಿನ್ನೆಲೆಯಲ್ಲಿ ಆತನ ಮೇಲೆ ದಾಳಿ ನಡೆಸಲಾಗಿದೆ.

ಗಂಭೀರ ಗಾಯಗೊಂಡಿದ್ದ ಆತನನ್ನು  ಲಕ್ನೋದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೇ  ಕೊನೆಯುಸಿರೆಳೆದಿದ್ದಾನೆ. ಆತನಿಗೆ ಬಿಜೆಪಿ ಪರವಾಗಿ ಪ್ರಚಾರ ಮಾಡದಂತೆ ಅಕ್ಕ ಪಕ್ಕದ ಮನೆಯವರು ಈ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದರು ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.



Join Whatsapp