ದಲಿತರ ಮನೆಯಲ್ಲಿ ಅಮಿತ್ ಶಾ ಮಾಡಿದ ಊಟ ತಯಾರಿಸಿದ್ದು ಬ್ರಾಹ್ಮಣರು : ಮಮತಾ ಬ್ಯಾನರ್ಜಿ

Prasthutha|

ಕೊಲ್ಕತಾ : ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಪಶ್ಚಿಮ ಬಂಗಾಳ ಭೇಟಿಯ ವೇಳೆ, ಆದಿವಾಸಿ ಕುಟುಂಬವೊಂದರ ಮನೆಯಲ್ಲಿ ಮಾಡಿದ ಊಟ, ಬ್ರಾಹ್ಮಣರು ತಯಾರಿಸಿದ್ದು ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದಿವಾಸಿ ಕುಟುಂಬದ ಮನೆಯಲ್ಲಿ ಊಟ ಮಾಡಲೆಂದು ತೆರಳಿದ್ದ ಅಮಿತ್ ಶಾ ಭೇಟಿಯು, ಬೂಟಾಟಿಕೆಯದ್ದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಶಾ ಅವರು ಇಲ್ಲಿಗೆ ಬಂದು ದಲಿತರ ಮನೆಯಲ್ಲಿ ಊಟ ಮಾಡಿರುವುದು ಬೂಟಾಟಿಕೆ. ಆಹಾರವನ್ನು ಹೊರಗಿನಿಂದ ತರಿಸಲಾಗಿತ್ತು ಮತ್ತು ಅದನ್ನು ಬ್ರಾಹ್ಮಣರು ಸಿದ್ಧ ಪಡಿಸಿದ್ದರು ಎಂದು ಬಂಕೂರ ಜಿಲ್ಲೆಯ ಖತ್ರಾ ಎಂಬಲ್ಲಿ ಸರಕಾರಿ ಕಾರ್ಯಕ್ರಮವೊಂದರ ಉದ್ಘಾಟನೆಯ ವೇಳೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ದಲಿತ ಕುಟುಂಬ ಕ್ಯಾಬೇಜ್ ಮತ್ತು ಕೊತ್ತಂಬರಿ ಸೊಪ್ಪು ಕತ್ತರಿಸುವ ವೀಡಿಯೊಗಳಿದ್ದವು. ಆದರೆ, ಶಾ ಊಟ ಮಾಡುವಾಗ ಆ ಆಹಾರ ಕಾಣಿಸಲಿಲ್ಲ. ಅವರು ಬಾಸ್ಮತಿ ಅಕ್ಕಿ, ಪೊಸ್ತ ಬೋರಾ ತಿಂದಿದ್ದರು. ಊಟವಾದ ನಂತರ ಶಾ ಹೊರಟು ಹೋದರು. ಆ ಮನೆಯಲ್ಲಿ ತಲಸ್ಸೇಮಿಯಾದಿಂದ ಬಳಲುತ್ತಿರುವ ಮಗುವೊಂದಿದ್ದು, ಆ ಮಗುವನ್ನೂ ಶಾ ನೋಡಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

- Advertisement -

ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಹೇಗೆ ಕಾಣಿಸುತ್ತಾರೆ ಎಂದೂ ಶಾಗೆ ಗೊತ್ತಿಲ್ಲ. ಹೀಗಾಗಿ ಬೇರೊಬ್ಬರ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದ್ದರು ಎಂದು ಮಮತಾ ಹೇಳಿದ್ದಾರೆ. ತಮ್ಮ ಸರಕಾರ ನ.15ರಂದು ಬಿರ್ಸಾ ಮುಂಡಾ ಜಯಂತಿಯಂದು ರಜೆ ಘೋಷಿಸಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.  

ದಲಿತರ ಮನೆಗಳಲ್ಲಿ ಊಟ ಮಾಡುವ ‘ಫ್ಯಾಶನ್’ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಸೇರಿದಂತೆ ಪ್ರಗತಿಪರರೂ ಹಲವಾರು ವರ್ಷಗಳಿಂದ ಮಾಡಿಕೊಂಡೇ ಬರುತ್ತಿದ್ದಾರೆ. ಆದರೆ, ಯಾವೊಬ್ಬ ನಾಯಕನೂ ತಮ್ಮ ಮನೆಯ ದಲಿತ ಕೆಲಸದಾಳುಗಳನ್ನು ತಮ್ಮ ಮನೆಯೊಳಗಿನ ಊಟದ ಹಾಲ್ ನಲ್ಲಿ ಕೂರಿಸಿ ಊಟ ಬಡಿಸಿದ ಬಗ್ಗೆ ಎಲ್ಲೂ ವರದಿಗಳಾಗುವುದಿಲ್ಲ.  



Join Whatsapp