ಮಾಜಿ ಪ್ರಧಾನಿ ದೇವೇಗೌಡ ಪತ್ನಿಗೆ ಐಟಿ ಇಲಾಖೆ ನೋಟಿಸ್

Prasthutha|

ಆತಂಕ ಪಡುವ ಅಗತ್ಯವಿಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

- Advertisement -

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೀಡಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ತಾಯಿ ಅವರಿಗೆ ಆದಾಯ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಮತ್ತು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕಾರಣ ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದು ತಿಳಿಸಿದ್ದಾರೆ.

ಇಂದು ನಡೆದ ಮಹತ್ವದ ವಿದ್ಯಾಮಾನವೊಂದರಲ್ಲಿ ಚೆನ್ನಮ್ಮಗೆ ಸಂಬಂಧಿಸಿದ ಆಸ್ತಿ ವಿವರದ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ನೋಟಿಸ್ ನೀಡಿರುವ ಕುರಿತು ಹೆಚ್.ಡಿ. ರೇವಣ್ಣ ಖಚಿತಪಡಿಸಿದ್ದು, ಐಟಿ ಅಧಿಕಾರಿಗಳು ತಾಯಿಗೆ ನೋಟಿಸ್ ಜಾರಿಗೊಳಿಸಿ ಆಸ್ತಿ ಕುರಿತು ಮಾಹಿತಿ ಕೇಳಿದ್ದಾರೆ. ಈ ನೋಟಿಸ್’ಗೆ ಸರಿಯಾಗಿ ಉತ್ತರಿಸಲು ತಿಳಿದಿದೆ. ಅಧಿಕಾರಿಗಳು ನನಗೆ ನೋಟಿಸ್ ನೀಡಿದ್ದರೆ ಬೇಸರ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಘಟನೆಯ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ತಾಯಿ ಅವರಿಗೆ ಆದಾಯ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದು ಹೇಳಿದ್ದಾರೆ.

“ನೋಟಿಸ್ ನೀಡಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆತಂಕಪಡುವ ಅಗತ್ಯವೂ ಇಲ್ಲ” ಎಂದರು.

ದೇವೆಗೌಡರ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದು ಮಹತ್ವ ಕೊಟ್ಟಿಲ್ಲ. ನಾವು ಸಹ ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ. ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ಏನು ಉತ್ತರ ಕೊಡಬೇಕೋ ಕೊಟ್ಟರಾಯಿತು. ನನ್ನ ಸಹೋದರ ರೇವಣ್ಣ ಅವರಿಗೂ ಇದನ್ನೇ ಹೇಳಿದ್ದೇನೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಆದಾಯ ತೆರಿಗೆ ಬಗ್ಗೆ ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರುತ್ತಾರೆ. ಆ ವಿವರಗಳನ್ನು ಸಲ್ಲಿಕೆ ಮಾಡಿದರೆ ಆಯಿತು ಎಂದು ಅವರು ತಿಳಿಸಿದ್ದಾರೆ.



Join Whatsapp