ಮೆಕ್ಸಿಕೋ: ಮಧ್ಯ ಮೆಕ್ಸಿಕೋದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಟೇಟ್ ಅಟಾರ್ನಿ ಜನರಲ್ ಕಚೇರಿ (FGE) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮೈಕೋಕಾನ್ ಪ್ರಾಂತ್ಯದ ಲಾಸ್ ಟಿನಾಜಾಸ್ ಎಂಬಲ್ಲಿ ನಡೆಯುತ್ತಿದ್ದ ಹಬ್ಬದ ಪ್ರಯುಕ್ತ ಏರ್ಪಟ್ಟ ಸಮಾರಂಭವೊಂದರ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತನಿಖಾಧಿಕಾರಿಗಳನ್ನು ಕರೆಸಲಾಯಿತು.
ಪ್ರಸಕ್ತ ಈ ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಟಾರ್ನಿ ಜನರಲ್ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅದು ತಿಳಿಸಿದೆ.
ಗುಂಡಿನ ದಾಳಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ.
ಈ ಮಧ್ಯೆ ಮೈಕೋಕಾನ್ ಮತ್ತು ನೆರೆಯ ಗುವಾನಜುವಾಂಟೊ ಎಂಬುದು ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ಪ್ರಾಂತ್ಯಗಳಲ್ಲಿ ಒಂದಾಗಿದ್ದು, ಮಾದಕವಸ್ತು ಕಳ್ಳಸಾಗಣೆ, ಇಂಧನದ ಅಕ್ರಮ ವ್ಯಾಪಾರ ಮತ್ತು ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಪ್ರತಿಸ್ಪರ್ಧಿ ಗ್ಯಾಂಗ್ ಗಳ ನಡುವಿನ ಘರ್ಷಣೆಯಿಂದಾಗಿ ಈ ಹತ್ಯೆ ನಡೆದಿದೆ ಎಂದು ಅಂದಾಜಿಸಲಾಗಿದೆ.