ಒರಿಸ್ಸಾ: ಭದ್ರಕ್ ಪುರಸಭೆಯ ಅಧ್ಯಕ್ಷೆಯಾಗಿ ಗುಲ್ಮಕಿ ಹಬೀಬ್ ಅವಿರೋಧ ಆಯ್ಕೆ

Prasthutha|

ಒರಿಸ್ಸಾ: 31 ವರ್ಷದ ಗುಲ್ಮಕಿ ದಲವ್ಜಿ ಹಬೀಬ್ ಭದ್ರಕ್ ಪುರಸಭೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಪುರಸಭೆಯ ಅಧ್ಯಕ್ಷೆಯಾಗಿದ್ದಾರೆ.

- Advertisement -

ಭದ್ರಕ್ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ  ಗುಲ್ಮಕಿ ದಲವ್ಜಿ ಹಬೀಬ್ ಸ್ವತಂತ್ರ ಅಭ್ಯರ್ಥಿಯಾಗಿದ್ದು,  ಬಿಜೆಡಿ ಅಭ್ಯರ್ಥಿ ಸಮಿತಾ ಮಿಶ್ರಾರನ್ನು 3,256 ಮತಗಳಿಂದ ಸೋಲಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಭದ್ರಾಕ್‌ ನಲ್ಲಿ ಪೌರ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬೇಡಿಕೆ ಇತ್ತು. ಹುದ್ದೆಯು ಮಹಿಳೆಯರಿಗೆ ಮೀಸಲಾಗಿರುವುದರಿಂದ ಹಬೀಬ್ ಅವಿರೋಧ ಆಯ್ಕೆಯಾದರು.



Join Whatsapp