ತೈಲ ಬೆಲೆ ಏರಿಕೆ; ಒಂದು ವಾರದಲ್ಲಿ ಆರು ಬಾರಿ ಹೆಚ್ಚಳವಾದ ಇಂಧನ ಬೆಲೆ

Prasthutha|

ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು.ಪಂಚ  ರಾಜ್ಯಗಳ ಚುನಾವಣೆ ಬಳಿಕ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂಧನ ದರವನ್ನು ಏರಿಕೆ ಮಾಡುತ್ತಿವೆ. ಕಳೆದ ಏಳು ದಿನಗಳಲ್ಲಿ ಆರು ಬಾರಿ ಇಂಧನ ದರ ಏರಿಕೆಯಾಗಿದ್ದು ಇಂದೂ ದೇಶದಲ್ಲಿ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ.

- Advertisement -

ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಮಾರ್ಚ್ 28ರಂದು ಇಂಧನ ದರ ಸರಾಸರಿ ಪ್ರತಿ ಲೀಟರ್ ಮೇಲೆ 30 ರಿಂದ 35 ಪೈಸೆಯಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸುಮಾರು 40% ಏರಿಕೆಯಾಗಿದ್ದು, ಕೈಗಾರಿಕಾ ಡೀಸೆಲ್ ಬೆಲೆ 25 ರೂ  ಏರಿಕೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ರೀಟೈಲ್ ಪೆಟ್ರೋಲ್, ಡೀಸೆಲ್ ದರ ಕೂಡಾ ಪರಿಷ್ಕರಿಸಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.41 ರೂ. ಡೀಸೆಲ್ ಬೆಲೆ 90.77 ರೂ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 114.19 ರೂ ಮತ್ತು 98.50 ರೂ ಆಗಿದೆ.



Join Whatsapp