ಶಿವಮೊಗ್ಗ: SSLC ವಿದ್ಯಾರ್ಥಿಗಳ ಮೇಲೆ ಜೇನು ದಾಳಿ !

Prasthutha|

ಶಿವಮೊಗ್ಗ: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಏಕಾಏಕಿಯಾಗಿ ಜೇನು ದಾಳಿ ನಡೆಸಿದೆ.

- Advertisement -

ಶಿವಮೊಗ್ಗದ ಮೇರಿ ಮೇರಿ ಮೆಕ್ಲೇಟ್ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಶಾಲೆಯ ಬಳಿ ನಿಂತಿದ್ದರು. ಈ ವೇಳೆ ಯಾರೋ ಕಿಡಿಗೇಡಿಗಳು ಜೇನಿನ ಗೊಂಚಲಿಗೆ ತೊಂದರೆ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ಜೇನಿನ ಗುಂಪು ಈ ಶಾಲೆಗೆ ಪರೀಕ್ಷೆ ಬರೆಯಲೆಂದು ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ದಾಳಿ ಮಾಡಿದೆ.

ಜೇನು ದಾಳಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಹಲ್ಲೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp