ಮಂಗಳೂರು |99 ಕೇಂದ್ರಗಳಲ್ಲಿ SSLC ಪರೀಕ್ಷೆ ಆರಂಭ

Prasthutha|

ಮಂಗಳೂರು: ಹಿಜಾಬ್ ಗೊಂದಲದ ನಡುವೆಯೂ SSLC ಪರೀಕ್ಷೆ ಆರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

- Advertisement -

ಹಿಜಾಬ್ ಧರಿಸಲು ಅವಕಾಶ ಇರುವ  ಶಾಲೆಗಳಿಲ್ಲಿ ಹಿಜಾಬ್ ಸಹಿತ ವಿದ್ಯಾರ್ಥಿಗಳು ಹಾಜರಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ತೆರಳುವ ತನಕ ಬುರ್ಖಾ ಧರಿಸಲು ಅವಕಾಶ ನೀಡಿಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳಲ್ಲಿ  29,712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 15615 ಬಾಲಕರು 14097  ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.

- Advertisement -

ಮಾ. 28 ರಿಂದ ಏ.11ರವರೆಗೆ ರಾಜ್ಯಾದ್ಯಂತ ‘ಎಸ್ಎಸ್ಎಲ್ಸಿ’ ಪರೀಕ್ಷೆ ನಡೆಯಲಿದೆ.



Join Whatsapp