ಉತ್ತರ ಪ್ರದೇಶ ಚುನಾವಣೆಯಲ್ಲಿ BSPಯ ಮುಸ್ಲಿಮ್ ಮತಗಳು SPಗೆ ಶಿಫ್ಟ್ ಆಗಿದೆ: ಮಾಯಾವತಿ

Prasthutha|

ಲಖನೌ: ಉತ್ತರ ಪ್ರದೇಶ  ಚುನಾವಣೆಯಲ್ಲಿ ಬಿಎಸ್ಪಿಯ ಮುಸ್ಲಿಮ್ ಮತಗಳು ಎಸ್ಪಿಗೆ ಬದಲಾಗಿವೆ ಎಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ವರಿಷ್ಠೆ ಮಾಯಾವತಿ ಹೇಳಿದ್ದಾರೆ.

- Advertisement -

2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಿದ್ದ ಎಲ್ಲ 403 ಅಭ್ಯರ್ಥಿಗಳು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು,  ಚುನಾವಣಾ ಫಲಿತಾಂಶಗಳಿಂದಾಗಿ ಹತಾಶರಾಗಬೇಡಿ. ಆದರೆ, ಈಗಿನಿಂದ ಬಲವಾಗಿ ತಯಾರಾಗಿ ಮತ್ತು ಸಜ್ಜುಗೊಳ್ಳಿ ಎಂದು ತಿಳಿಸಿದರು.

ಜಾತಿವಾದಿ ಪಕ್ಷಗಳ ಜೊತೆಗೆ ಈಗ ‘ಜಾತಿವಾದಿ ಮಾಧ್ಯಮ’ ಕೂಡ ತೊಡಗಿಸಿಕೊಂಡಿವೆ. ಬಾಬಾ ಸಾಹೇಬರು ಗುರುತಿಸಿದ ಮಾರ್ಗವನ್ನು ಅನುಸರಿಸಿ ದೀನದಲಿತರು ಅಧಿಕಾರವನ್ನು ಸ್ವೀಕರಿಸಲು ಅವರು ಬಯಸುವುದಿಲ್ಲ ಎಂದು ಆರೋಪಿಸಿದರು. ಸಮಾಜವಾದಿ ಪಕ್ಷ (ಎಸ್ಪಿ) ಕಡೆಗೆ ಮುಸ್ಲಿಂ ಮತಗಳ ದೊಡ್ಡ ಭಾಗವು ಬದಲಾಗಿರುವುದು ವಿಷಾದನೀಯ. ಯುಪಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮಾಧ್ಯಮಗಳಲ್ಲಿ ಬಿಎಸ್ಪಿಯ ಬಗ್ಗೆ ಋಣಾತ್ಮಕವಾಗಿ ತೋರಿಸಿದ್ದರಿಂದ ಈ ವಿದ್ಯಮಾನ ಸಂಭವಿಸಿದೆ. ‘ಮುಸ್ಲಿಂ ಸಮಾಜ ಏಕಪಕ್ಷೀಯವಾಗಿ ಎಸ್ಪಿಗೆ ಮತ ನೀಡಿದ್ದು, ಬಿಜೆಪಿ ವಿರೋಧಿ ಹಿಂದೂಗಳು ಬಿಎಸ್ಪಿಗೆ ಸೇರದಿರಲು ಇದೇ ಕಾರಣ ಎಂದು ಹೇಳಿದರು.



Join Whatsapp