ಒಡಿಶಾ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಹಿನ್ನಡೆ

Prasthutha|

ಭುವನೇಶ್ವರ: ಒಡಿಶಾ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು, 108 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಆಡಳಿತ ಪಕ್ಷ ಬಿಜೆಡಿ 95 ರಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದು, ಬಿಜೆಪಿ ಕೇವಲ 6, ಕಾಂಗ್ರೆಸ್ 4, ಸ್ವತಂತ್ರರು 3 ಸ್ಥಾನಗಳನ್ನು ಪಡೆಡಿದ್ದಾರೆ.

- Advertisement -

ಬಿಜು ಜನತಾ ದಳ 1,731 ಕೌನ್ಸಿಲರ್ ಸ್ಥಾನಗಳಲ್ಲಿ 1,183 ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷ 286 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 139 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಇತರರು 116 ಸ್ಥಾನಗಳನ್ನು ಪಡೆಡಿದ್ದಾರೆ.

ಪಂಚಾಯತ್ ಮತ್ತು ನಗರ ಚುನಾವಣೆಗಳಲ್ಲಿ ನಮಗೆ ಈ ಪ್ರಚಂಡ ವಿಜಯವನ್ನು ನೀಡಿದ್ದಕ್ಕಾಗಿ ನಮ್ಮ ರಾಜ್ಯದ ಜನರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ನಮ್ಮ ಜನರ ಕಲ್ಯಾಣಕ್ಕಾಗಿ ನಾವು ನಮ್ಮ ಒಳ್ಳೆಯ ಕೆಲಸವನ್ನು ಮುಂದುವರಿಸುತ್ತೇವೆ  ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.



Join Whatsapp