ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್’ 15ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸುಲಭವಾಗಿಯೇ ತಲೆಬಾಗಿದೆ.
ಗೆಲ್ಲಲು 132 ರನ್’ಗಳ ಸಾಧಾರಣ ಗುರಿ ಪಡೆದಿದ್ದ ಕೆಕೆಆರ್, ದ್ವಿತೀಯ ಇನ್ನಿಂಗ್ಸ್‌ನ 18.3 ಓವರ್’ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ, ಎಂಎಸ್ ಧೋನಿಯ ತಾಳ್ಮೆಯ ಅರ್ಧ ಶತಕ, ರಾಬಿನ್ ಉತ್ತಪ್ಪ [ 28] ಹಾಗೂ ನಾಯಕ ರವೀಂದ್ರ ಜಡೇಜಾ ಗಳಿಸಿದ 26ರನ್’ಗಳ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತ್ತು.
ಸಾಧಾರಣ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ ಯಾವ ಹಂತದಲ್ಲೂ ಬಿರುಸಿನ ಬ್ಯಾಟಿಂಗ್’ಗೆ ಮುಂದಾಗದ ಕೆಕೆಆರ್ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
ಕೆಕೆಆರ್ ಪರ ಆರಂಭಿಕ, ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ 44 ರನ್, ನಿತೀಶ್ ರಾಣಾ 21 ಹಾಗೂ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ 20 ರನ್ ಗಳಿಸಿದರು.
ಚೆನ್ನೈ ಪರ ಡ್ವೆನ್ ಬ್ರಾವೋ 2 ಹಾಗೂ ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಪಡೆದರು.
IPL-2022: ಮೊದಲ ಪಂದ್ಯದಲ್ಲೇ ಎಡವಿದ ಹಾಲಿ ಚಾಂಪಿಯನ್ಸ್ ! ಕೆಕೆಆರ್’ಗೆ ಗೆಲುವಿನ ‘ಶ್ರೇಯಸ್ಸು’
Prasthutha|