ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರಕ್ಕೆ ಆಲ್ ಇಂಡಿಯಾ ಲಾಯರ್ಸ್ ಅಸೋಶಿಯನ್ ಫಾರ್ ಜಸ್ಟಿಸ್ ಖಂಡನೆ : ಮುಖ್ಯಮಂತ್ರಿಗೆ ಮನವಿ

Prasthutha|

ಬೆಂಗಳೂರು : ಇತ್ತೀಚೆಗೆ ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಿರುವ ಹಿಂದೂ ದೇವಸ್ಥಾನ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ವ್ಯವಹಾರಕ್ಕೆ ಬಹಿಷ್ಕಾರ ಹಾಕಿದ್ದನ್ನು ಆಲ್ ಇಂಡಿಯಾ ಲಾಯರ್ಸ್ ಅಸೋಶಿಯನ್ ಫಾರ್ ಜಸ್ಟಿಸ್ ಖಂಡನೆ ವ್ಯಕ್ತಪಡಿಸಿದೆ.

- Advertisement -

ದೇವಸ್ಥಾನಗಳ ಸುತ್ತ ಮುತ್ತ ಮುಸ್ಲಿಂ ವ್ಯಾಪಾರಿಗಳಿಗೆ ತಡೆಯೊಡ್ಡಿದ ಕ್ರಿಯೆಯು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಆರ್ಥಿಕ ಬಹಿಷ್ಕಾರ ಎಂದು ಹೇಳಿದೆ.

ಮುಸ್ಲಿಂ ಸಮುದಾಯವು ಇತರ ಸಮುದಾಯಗಳೊಂದಿಗೆ ಭಾತೃತ್ವದಿಂದ ಸಮಾನವಾಗಿ ವ್ಯವಹರಿಸಲು ಅಸಮ್ಮತಿ ಸೂಚಿಸುವ ಮೂಲಕ ಧರ್ಮದ ಮಸಿ ಬಳಿದು ವ್ಯಾಪಾರಸ್ಥರ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದೂ ಹೇಳಿದೆ

- Advertisement -

ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಲ್ ಇಂಡಿಯಾ ಲಾಯರ್ಸ್ ಅಸೋಶಿಯನ್ ಫಾರ್ ಜಸ್ಟಿಸ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಆಯುಕ್ತರು ಹಾಗೂ ದತ್ತಿ ಇಲಾಖೆಗೆ ಮನವಿ ಮಾಡಿದೆ.



Join Whatsapp