‘ಬಾಂಬೆ ಡೇಸ್’ ಪುಸ್ತಕ ಬಿಡುಗಡೆ ಮಾಡದಂತೆ ಒತ್ತಡ : ಹೆಚ್. ವಿಶ್ವನಾಥ್

Prasthutha|

ಬಿಡುಗಡೆ ಆದರೆ ಸಿದ್ದು, ಬಿಎಸ್ವೈ, ಹೆಚ್ಡಿಕೆ ಬಣ್ಣ ಬಯಲು

- Advertisement -

ಮೈಸೂರು: ”ಬಾಂಬೆ ಡೇಸ್” ಪುಸ್ತಕ ಬಿಡುಗಡೆ ಮಾಡದಂತೆ ಒತ್ತಡ ಬರುತ್ತಿದೆ. ಆದರೂ ಚುನಾವಣೆಯೊಳಗೆ ಯಾವಾಗ ಬೇಕಾದರೂ ಬಿಡುಗಡೆಯಾಗಬಹುದು ಎಂದು ‘ಬಾಂಬೆ ಡೇಸ್’ ಪುಸ್ತಕದ ಕರ್ತೃ, ವಿಧಾನ ಪರಿಷತ್ ಸದಸ್ಯರೂ ಆದ ಎಚ್. ವಿಶ್ವನಾಥ್ ಹೇಳಿದ್ದಾರೆ.

ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕದಲ್ಲಿ ಮೈತ್ರಿ ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆ, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ದಿನಗಳವರೆಗೂ ದಾಖಲಿಸಿದ್ದೇನೆ. ಬಾಂಬೆಗೆ ಬಂದಿದ್ದವರು ಬಿಡುಗಡೆ ಮಾಡಬೇಡಿ ಅಂತಿದ್ದಾರೆ. ಅಷ್ಟೇ ಏಕೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಕೆಲವರಿಂದಲೂ ಒತ್ತಡ ಇದೆ ಎಂದರು.
ಪುಸ್ತಕ ಬಿಡುಗಡೆಯಾದರೆ ಮೂರೂ ಪಕ್ಷಗಳ ನಾಯಕರು ಬೆತ್ತಲಾಗುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಮೂವರ ಬಣ್ಣ ಬಯಲಾಗಲಿದೆ ಅಂತಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

- Advertisement -

“ನಾವು ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದೇವೆ ಎಂಬ ಅಪಪ್ರಚಾರ ನಡೆದಿದೆ. ಯಾರಿಗೂ ಬ್ಲಾಕ್ ಮೇಲ್ ಮಾಡಲು ಪುಸ್ತಕ ಬರೆದಿಲ್ಲ. ವಸ್ತುಸ್ಥಿತಿಯನ್ನ ಜನರಿಗೆ ತಿಳಿಸಲು ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ” ಎಂದರು

‘ಬಾಂಬೆ ಡೇಸ್’ ಪುಸ್ತಕವು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮಯದಲ್ಲಿ 17 ಮಂದಿ ಸಚಿವ, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಕುರಿತಾಗಿ ಬರೆದಿರುವ ಪುಸ್ತಕವಾಗಿದೆ. ಈ 17 ಮಂದಿಯಲ್ಲಿ ಹೆಚ್. ವಿಶ್ವನಾಥ್ ಕೂಡಾ ಒಬ್ಬರಾಗಿದ್ದರು.



Join Whatsapp