ಸರ್ಕಾರಿ ಜಾಗವನ್ನು ದೇವರು ಅತಿಕ್ರಮಿಸಿದರೂ, ಅವುಗಳನ್ನು ವಶಕ್ಕೆ ಪಡೆಯಲು ನಿರ್ದೇಶಿಸಲಾಗುವುದು: ಮದ್ರಾಸ್ ಹೈಕೋರ್ಟ್

Prasthutha|

ಚೆನ್ನೈ: ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿರುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ಸರ್ಕಾರಿ ಜಾಗವನ್ನು ದೇವರೇ ಅತಿಕ್ರಿಮಿಸಿದರೂ ಕೂಡ ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವುಗಳನ್ನು ವಶಕ್ಕೆ ಪಡೆಯಲು ನಿರ್ದೇಶಿಸಲಾಗುವುದೆಂದು ತಿಳಿಸಿದೆ.

- Advertisement -

ನ್ಯಾಯಮೂರ್ತಿ ಎನ್. ಆನಂದ್ ನೇತೃತ್ವದ ಏಕಸದಸ್ಯ ಪೀಠ, ಸಾರ್ವಜನಿಕ ರಸ್ತೆಯಲ್ಲಿ ಯಾರೇ ಅಕ್ರಮ ಎಸಗಿದ್ದರೂ ಅದನ್ನು ತಡೆಯಬೇಕು ಎಂದು ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಕೆಲವು ವ್ಯಕ್ತಿಗಳು ದೇವಸ್ಥಾನದ ಹೆಸರಿನಲ್ಲಿ ಅಥವಾ ಸ್ಥಳದಲ್ಲಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸರ್ಕಾರಿ ಜಾಗವನ್ನು ಅತಿಕ್ರಿಮಿಸಬಹುದು ಎಂಬ ಅನಿಸಿಕೆಯನ್ನು ಬೆಳೆಸಿಕೊಂಡ ಸಮಯವೊಂದಿತ್ತು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

- Advertisement -

ಯಾರ ಅಥವಾ ಯಾವ ಹೆಸರಿನಲ್ಲಿ ಇಂತಹ ಅತಿಕ್ರಮಣ ನಡೆಯುತ್ತದೆ ಎಂಬುವುದರ ಕುರಿತು ನ್ಯಾಯಾಲಯ ಚಿಂತಿಸುವುದಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ದೇವರು ಖುದ್ದಾಗಿ ಸರ್ಕಾರಿ ಜಾಗವನ್ನು ಅತಿಕ್ರಿಮಿಸಿದರೂ ಕೂಡ ನ್ಯಾಯಾಲಯಗಳು ಅಂತಹ ಅತಿಕ್ರಮಣಗಳನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡುತ್ತದೆ. ಕಾರಣ ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಸಂರಕ್ಷಿಸುವಂತಾಗಬೇಕು ಮತ್ತು ಎತ್ತಿಹಿಡಿಯಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

“ನಮ್ಮಲ್ಲಿ ಸಾಕಷ್ಟು ದೇವಾಲಯಗಳಿವೆ ಮತ್ತು ಯಾವುದೇ ದೇವರು ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸುವ ಮೂಲಕ ಅಥವಾ ದೇವಾಲಯದ ಹೆಸರಿನಲ್ಲಿ ಕಟ್ಟಡವನ್ನು ನಿರ್ಮಿಸುವ ಮೂಲಕ ಹೊಸ ದೇವಾಲಯಗಳನ್ನು ನಿರ್ಮಿಸಲು ಯಾವುದೇ ವಿನಂತಿಯನ್ನು ಮಾಡಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಎಸ್ ಕಲ್ಯಾಣರಾಮನ್ ವಾದ ಮಂಡಿಸಿದ್ದು, ಪ್ರತಿವಾದಿಗಳ ಪರ ವಕೀಲರಾದ ಪಿ ಶ್ರೀನಿವಾಸ್, ಎ ಅರುಲ್ಮೋಳಿ ವಾದ ಮಂಡಿಸಿದ್ದರು.



Join Whatsapp