ದುಬೈ ಎಕ್ಸ್ಪೋ 2022: ಯುಎಇ ಪ್ರವಾಸದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್

Prasthutha|

ಅಬುಧಾಬಿ: ಪ್ರಸಕ್ತ ದುಬೈ ನಡೆಯುತ್ತಿರುವ ‘ದುಬೈ ಎಕ್ಸ್ಪೋ 2022’ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಯುಎಇ ಪ್ರವಾಸದಲ್ಲಿದ್ದು, ಭಾರತೀಯ ಕಾನ್ಸುಲೇಟ್ ಜನರಲ್ ಅಮನ್ ಪುರಿ ಅವರು ಸ್ಟಾಲಿನ್ ಅವರನ್ನು ಸ್ವಾಗತಿಸಿದ್ದಾರೆ.

- Advertisement -

‘ದುಬೈ ಎಕ್ಸ್ಪೋ 2022’ ಪ್ರಯುಕ್ತ ನಡೆಯುವ ತಮಿಳುನಾಡಿನ ಪ್ರದರ್ಶನವನ್ನು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಶುಕ್ರವಾರ ಬೆಳಗ್ಗೆ ಉದ್ಘಾಟಿಸಿದ್ದಾರೆ. ಈ ಸಲದ ದುಬೈ ಎಕ್ಸ್ಫೋದಲ್ಲಿ ತಮಿಳುನಾಡು ಸರ್ಕಾರದ ವತಿಯಿಂದ ಟೆಕ್ಸ್ ಟೈಲ್ಸ್, ಕೃಷಿ, ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಅಂಶಗಳು ಪ್ರದರ್ಶನದಲ್ಲಿ ರಾರಾಜಿಸಲಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ದುಬೈ ಎಕ್ಸ್ಫೋ ಪ್ರದರ್ಶನಕ್ಕಾಗಿ ತಮಿಳುನಾಡು ಸರ್ಕಾರ ಸುಮಾರು ಐದು ಕೋಟಿ ರೂ. ಕಾಯ್ದಿರಿಸಿದೆ. ಜಾಗತಿಕ ಹೂಡಿಕೆದಾರರನ್ನು ತನ್ನ ಕಡೆ ಆಕರ್ಷಿತರಾಗಿಸುವುದು ತಮಿಳುನಾಡು ಸರ್ಕಾರದ ಉದ್ದೇಶವಾಗಿದೆ. ಶಾರ್ಜಾ ವಿಶ್ವ ವಿದ್ಯಾನಿಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಭಾಗವಹಿಸಲಿದ್ದಾರೆ. ಮಾತ್ರವಲ್ಲ ಅಬುಧಾಬಿಯಲ್ಲಿ ದೊರೆಯನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.

- Advertisement -

ರಾಜ್ಯ ಉದ್ಯಮ ಸಚಿವ ತಂಗಂ ತೆನ್ನರಸು, ಇಲಾಖಾ ಕಾರ್ಯದರ್ಶಿ ಸೇರಿದಂತೆ ಹಲವಾರ ಗಣ್ಯರು ಮುಖ್ಯಮಂತ್ರಿ ಸ್ಟಾಲಿನ್ ಜೊತೆಗೆ ಯುಎಇ ಪ್ರವಾಸದಲ್ಲಿದ್ದಾರೆ.



Join Whatsapp