ಶ್ರೀಲಂಕಾದಲ್ಲಿ ಭೀಕರ ಕ್ಷಾಮ: ಕಾಗದ ಕೊರತೆಯಿಂದಾಗಿ ಮುದ್ರಣ ಸ್ಥಗಿತಗೊಳಿಸಿದ ಮುಖ್ಯವಾಹಿನಿ ಪತ್ರಿಕೆಗಳು

Prasthutha|

ಕೊಲಂಬೊ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭೀಕರ ಕ್ಷಾಮ ಎದುರಾಗಿದ್ದು, ಕಾಗದದ ಕೊರತೆಯಿಂದಾಗಿ ಮುಖ್ಯವಾಹಿನಿಯಲ್ಲಿರುವ ಎರಡು ಪತ್ರಿಕೆಗಳು ತನ್ನ ಮುದ್ರಣವನ್ನು ಸ್ಥಗಿತಗೊಳಿಸಿದೆ.

- Advertisement -

ಸದ್ಯ 2.2 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶ್ರೀಲಂಕಾವು 1948 ರಲ್ಲಿ ಬ್ರಿಟನ್’ನಿಂದ ಸ್ವಾತಂತ್ರ್ಯಗೊಂಡಿದ್ದು, ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರಮುಖ ಪತ್ರಿಕೆಗಳಾದ ಉಪಾಲಿ ನ್ಯೂಸ್ ಪೇಪರ್ ಮಾಲಕತ್ವದ ಇಂಗ್ಲಿಷ್ ಆವೃತ್ತಿ ದಿ ಐಲ್ಯಾಂಡ್ ಮತ್ತು ಸಿಂಹಳೀಯ ಆವೃತ್ತಿ ದಿವೈನಾ ಎಂಬ ಪತ್ರಿಕೆಗಳು ಕಾಗದದ ಕೊರತೆಯಿಂದಾಗಿ ಕೇವಲ ಆನ್ ಲೈನ್ ನಲ್ಲಿ ಮಾತ್ರ ಸೇವೆಯನ್ನು ನೀಡುತ್ತಿವೆ.

- Advertisement -

ಈ ಮಧ್ಯೆ ಹಲವು ರಾಷ್ಟ್ರೀಯ ಪತ್ರಿಕೆಗಳು ಮುದ್ರಣ ಖರ್ಚು ಹೆಚ್ಚಾಗಿರುವುದರಿಂದ ಐದಾರು ತಿಂಗಳಿನಿಂದ ತನ್ನ ಪುಟಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಮತ್ತೊಂದೆಡೆ ಕಾಗದ ಮತ್ತು ಶಾಯಿ ದುಬಾರಿಯಾದ ಕಾರಣ ಸುಮಾರು 35 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp