ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ವೀರನ ಕುಣಿತ ನೃತ್ಯ ಮಾಡಿದ್ದು, ಸ್ನೇಹಿತರು ಮತ್ತು ಬೆಂಬಲಿಗರ ಜೊತೆ 40 ನಿಮಿಷಗಳ ಕಾಲ ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ.
74ರ ಹರೆಯದ ಸಿದ್ದರಾಮಯ್ಯ ಅವರ ನೃತ್ಯ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದರು. ನೂಕು ನುಗ್ಗಲು ಮಧ್ಯೆ ಸಿದ್ದರಾಮಯ್ಯ ನೃತ್ಯ ಮಾಡಿ ಜನರನ್ನು ರಂಜಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಅಪ್ಪ ಪ್ರತಿ ವರ್ಷ ಜಾತ್ರೆಯ ವೇಳೆ ವೀರನ ಕುಣಿತ ಮಾಡುತ್ತಿದ್ದರು. ಆದರೆ ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ನಾನು ನೃತ್ಯ ಮಾಡುವುದಿಲ್ಲ ಎಂದು ತಂದೆ ಮೊದಲೇ ಹೇಳಿದ್ದರು. ಆದರೆ ಜನರ ಉತ್ಸಾಹ ನೋಡಿ ಅವರು ನೃತ್ಯ ಮಾಡಿದ್ದಾರೆ ಎಂದು ತಿಳಿಸಿದರು.