ಸತ್ತ ಅಣ್ಣನ ಹೆಸರಿನಲ್ಲಿ 24 ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ ತಮ್ಮ ಬಂಧನ

Prasthutha|

ಮೈಸೂರು: ಸತ್ತ ಅಣ್ಣನ ಹೆಸರಿನಲ್ಲಿ 24 ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಶಿಕ್ಷಕನಾಗಿ ಆಯ್ಕೆಯಾದ ಅಣ್ಣ ವೃತ್ತಿಗೆ ಸೇರುವ ಮುನ್ನವೇ ಅಕಾಲಿಕ ಮರಣ ಹೊಂದಿದ್ದು, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ ಹೆಸರಲ್ಲಿ ಆತನ ಕಿರಿಯ ಸಹೋದರ ಲಕ್ಷಣೇಗೌಡ ಕೆಲಸ ಮಾಡುತ್ತಿದ್ದರು.

ಲಕ್ಷಣೇಗೌಡ ಅಕ್ರಮವಾಗಿ ಶಾಲೆಗಳಲ್ಲಿ 24 ವರ್ಷ ಶಿಕ್ಷಕನಾಗಿ ಕರ್ತವ್ಯ ಮುಂದುವರಿಸಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.



Join Whatsapp