ಪುತ್ತೂರು: ಉಪ್ಪಿನಂಗಡಿಯಲ್ಲಿ ಮುಸ್ಲಿಮರ ಜೊತೆ ವ್ಯವಹಾರ ಮಾಡುವುದಿಲ್ಲ ಎಂಬ ವಾಟ್ಸಪ್ ಬರಹಕ್ಕೆ ಸಂಬಂಧಿಸಿ ವರ್ತಕರು ಪುತ್ತೂರು ಡಿವೈಎಸ್ಪಿ ಗಾನಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಮುಸ್ಲಿಮರ ಜೊತೆ ದೈನಂದಿನ ವ್ಯವಹಾರ ಮಾಡುವುದಿಲ್ಲ ಎಂದು 32 ಅಂಗಡಿಗಳ ಹೆಸರುಗಳಿರುವ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ಉಪ್ಪಿನಂಗಡಿ ವರ್ತಕ ಸಮುದಾಯ ಪೊಲೀಸರಿಗೆ ದೂರು ನೀಡಿದೆ.
ಸಮಾಜದ ಎಲ್ಲಾ ಮಂದಿಯೂ ನಮ್ಮಲ್ಲಿ ಗ್ರಾಹಕರಾಗಿದ್ದು, ವ್ಯಾಪಾರಿ ಧರ್ಮ ಪರಿಪಾಲನೆಯೊಂದಿಗೆ ವ್ಯವಹಾರ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ವ್ಯಾಪಾರ ಮಳಿಗೆಯ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಸಂಘರ್ಷವನ್ನು ಮಾಡಲು ಯತ್ನಿಸಿದ ದುರ್ಷರ್ಮಿಯನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಮಾನವಿ ಮಾಡಲಾಗಿದೆ.