ವೃದ್ಧ ವ್ಯಕ್ತಿಯ ಮೃತದೇಹವನ್ನು ಹೊತ್ತು ಸಾಗಿಸಿದ ಮಹಿಳಾ ಎಸ್ಸೈ; ವ್ಯಾಪಕ ಪ್ರಶಂಸೆ

Prasthutha|

ಅಮರಾವತಿ: ಜನರು ಮೃತದೇಹವನ್ನೆತ್ತಲು ಮುಂದೆ ಬಾರದ ಪರಿಣಾಮ ಮಹಿಳಾ ಎಸ್ಸೈಯೊಬ್ಬರು ಅರುವತ್ತು ವರ್ಷದ ಹಿರಿಯ ವ್ಯಕ್ತಿಯ ಮೃತದೇಹವನ್ನು ಕಾನ್ಸ್ಟೇಬಲ್‌‌ ಗಳ ಸಹಾಯದೊಂದಿಗೆ ಕಾಡಿನ ದಾರಿಯಲ್ಲಿ ಮೂರು ಕಿ.ಮೀವರೆಗೆ ಹೆಗಲಲ್ಲಿ ಹೊತ್ತು ಸಾಗಿಸಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಹನ್ಮಂತುನಿಪೇಟ್ ನಲ್ಲಿ ನಡೆದಿದೆ.

- Advertisement -

ಕಾಡಿನಲ್ಲಿ ಮೃತದೇಹ ಸಿಕ್ಕಿದೆ ಎಂದು ಪೊಲೀಸರಿಗೆ ತಿಳಿಸಿದ ಊರ ಮಂದಿ, ಮೃತದೇಹವನ್ನು ಕಾಡಿನಿಂದ ಹೊರಗೆ ತರಲು ಹಿಂಜರಿಯುತ್ತಿದ್ದರು. ಈ ವೇಳೆ  ಮಹಿಳಾ ಎಸ್ಸೈ ಕೃಷ್ಣಾ ಪವಾನಿಯವರು ಧೈರ್ಯ ವಹಿಸಿ ಮೃತದೇಹವನ್ನು ಕಾನ್ಸ್ಟೇಬಲ್‌‌ ಗಳ ನೆರವಿನಿಂದ ಕಾಡಿನಿಂದ ಹೊರಗೆ ತಂದಿದ್ದಾರೆ.

ಈ ಹಿಂದೆ ಶ್ರೀಕುಳಂ ಜಿಲ್ಲೆಯಲ್ಲಿ ಎಸ್ಸೈ ಶಿರಿಶ ಎಂಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇದೇ ರೀತಿ  ಎರಡು ಕಿಲೊಮೀಟರ್ ದೂರ ಮೃತಹದೇಹವನ್ನು ಹೊತ್ತು ನಡೆದು ಪ್ರಶಂಸೆಗೆ ಪಾತ್ರರಾಗಿದ್ದರು.



Join Whatsapp