ಕೀವ್: ಉಕ್ರೇನ್ ವಿರುದ್ಧ ರಷ್ಯಾ ಸೇನೆಯ ಭೀಕರ ದಾಳಿಯನ್ನು ಜಗತ್ತಿನಾದ್ಯಂತ ಜನರೆಲ್ಲರೂ ಬೀದಿಗಿಳಿದು ಖಂಡಿಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.
ಉಕ್ರೇನ್ ನ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಝೆಲೆನ್ಸ್ಕಿ “ರಷ್ಯಾ ಸೇನೆಯ ಯುದ್ಧ ಉಕ್ರೇನ್ ಮೇಲೆ ಮಾತ್ರವಲ್ಲ, ಸ್ವಾತಂತ್ರ್ಯದ ವಿರುದ್ಧ ಯುದ್ಧವಾಗಿದೆ. ಆದ್ಧರಿಂದ ಈ ಯುದ್ಧವನ್ನು ಕೊನೆಗಾಣಿಸಲು ಇದರ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲಲೇಬೇಕು ಎಂದು ಕೇಳಿಕೊಂಡಿದ್ದಾರೆ. ಮಾರ್ಚ್ 24ಕ್ಕೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ.