ಮುನ್ಸಿಪಾಲ್ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಕ್ಷ ರಾಜಕೀಯ ತ್ಯಜಿಸಲಿದೆ: ಅರವಿಂದ್ ಕೇಜ್ರಿವಾಲ್

Prasthutha|

ನವದೆಹಲಿ: ಮುಂಬರುವ ಮುನ್ಸಿಪಾಲ್ ಚುನಾವಣೆಯನ್ನು ಕ್ಲಿಪ್ತ ಸಮಯಕ್ಕೆ ನಡೆಸಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದರೆ ಆಮ್ ಆದ್ಮಿ ಪಕ್ಷವು ರಾಜಕೀಯವನ್ನು ತ್ಯಜಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

- Advertisement -

ಮುನ್ಸಿಪಾಲ್ ಚುನಾವಣೆಯನ್ನು ಮುಂದೂಡುವ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಮೂರು ನಾಗರಿಕ ಸಂಸ್ಥೆಗಳಾದ ಉತ್ತರ, ಪೂರ್ವ ಮತ್ತು ದಕ್ಷಿಣವನ್ನು ಏಕೀಕರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ ಕೇಜ್ರಿವಾಲ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆಂದು ಪ್ರಚಾರಪಡಿಸುತ್ತಿದೆ ಮತ್ತು ಸಣ್ಣ ಚುನಾವಣೆಯಿಂದ ಅದು ಹೆದರುತ್ತಿದೆ ಎಂದು ಆರೋಪಿಸಿದ ಅವರು ಕ್ಲಿಪ್ತ ಸಮಯಕ್ಕೆ ಮುನ್ಸಿಪಾಲ್ ಚುನಾವಣೆ ನಡೆಸುವಂತೆ ಅವರು ಬಿಜೆಪಿಯನ್ನು ಒತ್ತಾಯಿಸಿದ್ದಾರೆ.

ದೆಹಲಿ ಮುನ್ಸಿಪಾಲ್ ಚುನಾವಣೆಯನ್ನು ಬಿಜೆಪಿ ಮುಂದೂಡಿರುವುದು ಬ್ರಿಟಿಷರನ್ನು ದೇಶದಿಂದ ಓಡಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ತ್ಯಾಗ ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನವಾಗಿದೆ. ಇಂದು ಸೋಲಿನ ಭಯದಿಂದ ದೆಹಲಿ ಮುನ್ಸಿಪಾಲ್ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯ ಮತ್ತು ದೇಶದ ಚುನಾವಣೆಗಳನ್ನು ಮುಂದೂಡಲೂ ಬಹುದು ಎಂದು ಕೇಜ್ರಿವಾಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.




Join Whatsapp