ರಷ್ಯಾ–ಉಕ್ರೇನ್ ಕದನ; ರಷ್ಯಾದ 9,861 ಯೋಧರ ಸಾವು

Prasthutha|

ಮಾಸ್ಕೋ: ಉಕ್ರೇನ್‌ ಮೇಲೆ ದಾಳಿ ನಡೆಸಿ ರಷ್ಯಾ ಇದುವರೆಗೆ 9,861 ಸೈನಿಕರನ್ನು ಕಳೆದುಕೊಂಡಿದ್ದು,  16 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು  ರಷ್ಯಾ ಸರಕಾರ‌ದ ಪರವಾಗಿರುವ ವೆಬ್‌ಸೈಟ್‌ ಒಂದರಲ್ಲಿ ಈ ಮಾಹಿತಿಯನ್ನು ಹಂಚಲಾಗಿದೆ.

- Advertisement -

ಜಗತ್ತಿನಾದ್ಯಂತ ಈ ಅಂಶ ಪ್ರಚಾರ ಪಡೆದುಕೊಳ್ಳುತ್ತಲೇ ವೆಬ್ ಸೈಟ್ ನಿಂದ  ಮಾಹಿತಿಯನ್ನು ಹಿಂಪಡೆಯಲಾಗಿದೆ.

ಅಫ್ಘಾನಿಸ್ಥಾನದಲ್ಲಿ ರಷ್ಯಾ 1979ರಿಂದ 10 ವರ್ಷ ಗಳ ಕಾಲ ನಡೆಸಿದ್ದ ಸಂಘರ್ಷದಲ್ಲಿ 15 ಸಾವಿರ ಮಂದಿ ಸೈನಿಕರು ಸಾವಿಗೀಡಾಗಿದ್ದರು. ಈ ನಡುವೆ 2,389 ಮಂದಿ ಮಕ್ಕಳನ್ನು ಲುಗಾನ್ಸ್ಕ್  ಮತ್ತು ಡಾನೆಸ್ಕ್ ನಿಂದ ರಷ್ಯಾ ಅಪಹರಿಸಿದೆ ಎಂದು ಅಮೆರಿಕ ಸರಕಾರ‌ ಆರೋಪಿಸಿದೆ.

- Advertisement -

ಉಕ್ರೇನ್‌ ಮೇಲೆ ದಾಳಿ ನಡೆಸಿರುವ ರಷ್ಯಾದ ಬಗ್ಗೆ ಭಾರತ ಮಾತನಾಡಲು ಹೆದರುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಭಾರತವನ್ನು ಟೀಕಿಸಿದ್ದಾರೆ. “ಪುತಿನ್‌ ರ ಯುದ್ಧದಾಹವನ್ನು ಕ್ವಾಡ್‌ ಸದಸ್ಯ ರಾಷ್ಟ್ರಗಳಾದ ಜಪಾನ್‌, ಆಸ್ಟ್ರೇಲಿಯ ಖಂಡಿಸಿದ್ದು, ಕ್ವಾಡ್‌ ಸದಸ್ಯ ರಾಷ್ಟ್ರವಾಗಿರುವ ಭಾರತ ಮೌನವಾಗಿದೆ. ಇದು, ರಷ್ಯಾ ಬಗ್ಗೆ ಭಾರತ ಹೊಂದಿರುವ ಭೀತಿಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿಸಿದ್ದು ,ಇನ್ನೊಂದೆಡೆ ಕೀವ್‌ ನಗರದ ಹೊರವಲಯವನ್ನು ಉಕ್ರೇನ್‌ ಸೇನೆ ಮರುವಶಪಡಿಸಿಕೊಂಡಿದೆ.



Join Whatsapp