ಈ ಹಿಂದೆ ಎಲ್ಲಾ ಪ್ರಕರಣಗಳಲ್ಲಿ ದೂರು ಬರುವವರಗೆ ಕಾದಿದ್ದಾರ: ಜಾತ್ರೆಗಳಲ್ಲಿ ವ್ಯಾಪಾರ ನಿಷೇಧದ ಬ್ಯಾನರ್ ಕುರಿತು ಕಮಿಷನರ್ ಹೇಳಿಕೆಗೆ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ

Prasthutha|

ಮಂಗಳೂರು: ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಮರ ವ್ಯಾಪಾರ ವಹಿವಾಟುಗಳಿಗೆ ಅವಕಾಶವಿಲ್ಲ ಎನ್ನುವ ಬ್ಯಾನರ್ ವಿಚಾರಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಬಹಿರಂಗವಾಗಿ ಬ್ಯಾನರ್ ಹಾಕುತ್ತಿರುವ ಕುರಿತು ದೂರು ನೀಡಿದರೆ ಕಾನೂ‌ನು ತಜ್ಞರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಕಮಿಷನರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಈ ಹಿಂದೆ ಎಲ್ಲಾ ಪ್ರಕರಣಗಳಲ್ಲಿ ದೂರು ಬರುವವರಗೆ ಕಾದಿದ್ದಾರ ಎಂದು ಪ್ರಶ್ನಿಸಿದ್ದಾರೆ.

- Advertisement -

ಮಂಗಳೂರಿನ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾಧ್ಯಮಗಳಿಗೆ ಬಹಳ ಚಂದದ ಹೇಳಿಕೆಗಳನ್ನು ನೀಡುತ್ತಿದ್ದು ಜಾತ್ರೋತ್ಸವಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ಹೇರುತ್ತಿರುವ, ಆ ಕುರಿತು ಬಹಿರಂಗವಾಗಿ ಬ್ಯಾನರ್ ಹಾಕುತ್ತಿರುವ ಕುರಿತು ಕೇಳಿದರೆ, ದೂರು ನೀಡಿದರೆ ಕಾನೂ‌ನು ತಜ್ಞರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುತ್ತೇನೆ” ಅಂತ ಉತ್ತರಿಸಿದ್ದಾರೆ ಎಂತಹಾ ಅದ್ಭುತ ಮಾತಿದು ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಬಹಿಷ್ಕಾರ, ಮತೀಯ ಹಿಂಸೆಗೆ ಬಹಿರಂಗ ಪ್ರಚೋದನೆ ಪ್ರಕರಣಗಳಲ್ಲಿ ಕಾನೂನು ತಜ್ಞರ ಜೊತೆ ಸಮಾಲೋಚಿಸುವಂತದ್ದು ಏನಿದೆ ಎಂದು ಮುನೀರ್ ಪ್ರಶ್ನಿಸಿದ್ದಾರೆ. ಇದೆಲ್ಲಾ ಇವರಿಗೆ ತಿಳಿಯದಂತಹ ಕಗ್ಗಂಟಿನ ಕಾನೂನಾ ? ಕಲ್ಲಡ್ಕ ಭಟ್ಟರು ಕಳೆದ ಎರಡು ದಿನಗಳಲ್ಲಿ‌ ನೀಡುತ್ತಿರುವ ಅನಾಹುತಕಾರಿ ಹೇಳಿಕೆಗಳ ಒಂದಂಶ ಒಬ್ಬ ಮುಸಲ್ಮಾನ, ಒಬ್ಬ ಜಾತ್ಯಾತೀತವಾದಿ ನೀಡಿದ್ದರೆ ಇವರು ಯಾರ ದೂರಿಗೂ ಕಾಯದೆ ನೇರ ಜೈಲಿಗಟ್ಟುತ್ತಿರಲಿಲ್ಲವೆ ? ಶೇಮ್ ಶೇಮ್ ಕಮೀಷನರ್ ಸಾಬ್ ಎಂದು ಮುನೀರ್ ಕಾಟಿಪಳ್ಳ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.



Join Whatsapp