ಜನರಿಗೆ ಕಾಶ್ಮೀರ್ ಫೈಲ್ಸ್, ಭಗವದ್ಗೀತೆ, ಹಿಂದೂ-ಮುಸ್ಲಿಂ ಎಂಬ ಭಾವನಾತ್ಮಕ ಅರವಳಿಕೆ ಡೋಸ್ ನೀಡಿ ಸುಲಿಗೆ ಮಾಡುತ್ತಿರುವ ಬಿಜೆಪಿ: ಕಾಂಗ್ರೆಸ್

Prasthutha|

ಬೆಂಗಳೂರು: ನಿರೀಕ್ಷೆಯಂತೆ ಪಂಚರಾಜ್ಯ ಚುನಾವಣೆಯ ನಂತರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಗಳ ಬೆಲೆ ಏರಿಕೆಯಾಗಿದೆ. ದೇಶದ ಜನರಿಗೆ ಕಾಶ್ಮೀರ್ ಫೈಲ್ಸ್, ಭಗವದ್ಗೀತೆ, ಹಿಂದೂ – ಮುಸ್ಲಿಂ ಎಂಬ ಭಾವನಾತ್ಮಕ ಅರವಳಿಕೆ ಡೋಸ್ ಗಳನ್ನು ಆಗಾಗ ನೀಡುತ್ತಾ, ಎಚ್ಚರ ತಪ್ಪಿಸಿ ಸುಲಿಗೆ ಮಾಡುತ್ತಿದೆ ಬಿಜೆಪಿ ಸರ್ಕಾರ. ಜನರ ಬದುಕನ್ನ ನಿರ್ನಾಮ ಮಾಡುವುದೇ ಬಿಜೆಪಿ ಗುರಿ ಎಂದು ಕಾಂಗ್ರೆಸ್ ಟೀಕಿಸಿದೆ.

- Advertisement -

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಜಾತ್ಯತೀತ ತತ್ವಗಳ ತಳಹದಿಯ ಮೇಲೆ ಸೌಹಾರ್ದ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಕಾಂಗ್ರೆಸ್. ದೇಶದ ಎಲ್ಲ ಜಾತಿ, ಧರ್ಮ, ವರ್ಗ, ಸಮುದಾಯಗಳ ಶ್ರೇಯೋಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಶೋಷಿತರ ಧ್ವನಿಯಾಗಿದ್ದು ಕಾಂಗ್ರೆಸ್. ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲಕ ಸೌಹಾರ್ದ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ತಿಳಿಸಿದೆ.

ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ಮೇಲೆ ಹೇರಿದ್ದ ‘ಲಾಕ್ ಡೌನ್’ ತೆಗೆದುಹಾಕಲಾಗಿದೆ. ಈಗ ಸರ್ಕಾರ ನಿರಂತರವಾಗಿ ಬೆಲೆಗಳನ್ನು ‘ವಿಕಾಸ’ ಮಾಡಲಿದೆ. ಹಣದುಬ್ಬರದ ಸಾಂಕ್ರಾಮಿಕದ ಬಗ್ಗೆ ಪ್ರಧಾನಿಗಳನ್ನು ಕೇಳಿ, ಅವರು ಚಪ್ಪಾಳೆ ತಟ್ಟಲು ಹೇಳುತ್ತಾರೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -

ಮಾನ್ಯ ಬೊಮ್ಮಾಯಿಯವರೇ, ಇನ್ನೂ ಅದೆಷ್ಟು ದಿನ ಕೇಂದ್ರದಿಂದ GST ಪಾಲನ್ನು ಕೇಳದೆ ಕೈಕಟ್ಟಿ ನಿಂತಿರುತ್ತೀರಿ? ತೆರಿಗೆ ಪಾಲಿನಲ್ಲಿ 30 ಸಾವಿರ ಕೋಟಿಯನ್ನು ಸಾಲದ ರೂಪದಲ್ಲಿ ಪಡೆಯಲು ನಾಚಿಕೆಯಾಗುವುದಿಲ್ಲವೇ? 12 ಸಾವಿರ ಕೋಟಿ ಕೇಳಲು ನಿಮ್ಮ ಎದೆ ನಡುಗುವುದೇಕೆ? ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳಿಂದ ಸಾಲ ಡಬಲ್ ಆಗಿದೆಯೇ ಹೊರತು ಬೇರೆನಿಲ್ಲ ಎಂದು ಕಾಂಗ್ರೆಸ್ ಹರಿಹಾಯ್ದಿದೆ.




Join Whatsapp