ಕಾಪು, ಮುಲ್ಕಿ ಬಳಿಕ ಪುತ್ತೂರಿಗೂ ವ್ಯಾಪಿಸಿದ “ಹಿಂದೂಯೇತರರಿಗೆ ವ್ಯಾಪಾರ ನಿಷಿದ್ಧ” ಆದೇಶ!

Prasthutha|

ಪುತ್ತೂರು: ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ಹಿಂದೂಯೇತರರಿಗಿಲ್ಲ ವ್ಯಾಪಾರಕ್ಕೆ ಅವಕಾಶ ಎನ್ನುವ ಆದೇಶ ಕಾಪು, ಮುಲ್ಕಿ ಬಳಿಕ ಇದೀಗ ಪುತ್ತೂರಿಗೂ ವ್ಯಾಪಿಸಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವಕ್ಕೆ ಹಿಂದೂಯೇತರರ ವ್ಯಾಪಾರಕ್ಕೆ ತಡೆಹಿಡಿಯಲಾಗಿದೆ.

- Advertisement -


ಎ.10ರಿಂದ 20ರ ತನಕ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಬಾಂಧವರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಜಾತ್ರೋತ್ಸವದ ತಾತ್ಕಾಲಿಕ ಸಂತೆ ಏಲಂ ಪ್ರಕಟಣೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಪ್ರಕಟಣೆಯಲ್ಲಿ `ಹಿಂದೂ ಬಾಂಧವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ಬರೆಯಲಾಗಿದೆ.



Join Whatsapp